Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

ಹೊಸದಿಲ್ಲಿ: ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತಾಗಿರುವ ಅಪರೂಪದ ಘಟನೆ ನಡೆದಿದೆ. ಜೈಲಿನಲ್ಲಿದ್ದ ಆರೋಪಿಯನ್ನು ಸುಪ್ರೀಂಕೋರ್ಟ್‌ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

First published:

  • 17

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ಪಶ್ಚಿಮ ಬಂಗಾಳದ ಪುರ್ದ್ವಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ತನ್ನ ಪತ್ನಿಯ ಕೊಲೆಗೆ ಸಂಬಂಧಿಸಿದಂತೆ ನಿಖಿಲ್ ಚಂದ್ರ ಮಂಡಲ್ ಎಂಬಾತ ನ್ಯಾಯಾಲಯದ ಬಾಹ್ಯ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ಆಧಾರದಲ್ಲಿ 1983ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.

    MORE
    GALLERIES

  • 27

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ಆದರೆ ಇದೇ ಪ್ರಕರಣದಲ್ಲಿ ನಾಲ್ಕು ವರ್ಷಗಳ ನಂತರ 1987ರ ಮಾರ್ಚ್‌ನಲ್ಲಿ ವಿಚಾರಣಾ ನ್ಯಾಯಾಲಯವು ಆತನನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತ್ತು.

    MORE
    GALLERIES

  • 37

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ನ್ಯಾಯಾಲಯದ ಹೊರಗಿನ ತಪ್ಪೊಪ್ಪಿಗೆಯ ಹೊರತಾಗಿ ಸ್ವತಂತ್ರ ಪುರಾವೆಗಳನ್ನು ಹಾಜರುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಹೇಳಿತ್ತು.

    MORE
    GALLERIES

  • 47

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ನಂತರ ಸುಮಾರು 22 ವರ್ಷಗಳ ಬಳಿಕ ಕೊಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠ 2008ರ ಡಿಸೆಂಬರ್‌ನಲ್ಲಿ ಈ ಪ್ರಕರಣದಲ್ಲಿ ಮಂಡಲ್ ತಪ್ಪಿತಸ್ಥನೆಂದು ತೀರ್ಪು ನೀಡಿ, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

    MORE
    GALLERIES

  • 57

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ಇತ್ತ ನಿಖಿಲ್ ಚಂದ್ರ ಮಂಡಲ್ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ 2009ರಲ್ಲಿಯೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ 14 ವರ್ಷ ಆತನ ಅರ್ಜಿ ಅಲ್ಲಿಯೇ ಬಾಕಿ ಉಳಿದಿತ್ತು.

    MORE
    GALLERIES

  • 67

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ಕೊನೆಗೂ ಆತನ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಬಿಆರ್ ಗವಾಯ್ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ನಿರ್ಧಾರ ಸರಿಯಾಗಿದೆ ಎಂದು ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿದೆ.

    MORE
    GALLERIES

  • 77

    Supreme Court Verdict: ಕೊಲೆ ಆರೋಪದಲ್ಲಿ ಬಂಧಿತನಾಗಿದ್ದವ 40 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು!

    ಅಲ್ಲದೇ ಈ ಪ್ರಕರಣವು ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿದೆ. ಸಾಧ್ಯತೆಗಳು ಮತ್ತು ಸಂಭಾವ್ಯತೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ಆರೋಪಿಯ ತಪ್ಪನ್ನು ನಿಖರವಾಗಿ ತೋರಿಸುವಂತಹ ಪುರಾವೆಗಳು ಇರಬೇಕು ಎಂದು ಹೇಳಿದೆ.

    MORE
    GALLERIES