ದತ್ತಾತ್ರೇಯ ಗಾಡ್ಗೆ ತನ್ನ ತೋಟದಲ್ಲಿ 20-25 ಮಾವಿನ ಬಗೆಯ ಮರಗಳನ್ನು ನೆಟ್ಟಿದ್ದಾರೆ. ಈ ಎಲ್ಲದರಲ್ಲೂ ಏನಾದರೊಂದು ಪ್ರಯೋಗ ನಡೆಸುತ್ತಲೇ ಇರುತ್ತಾರೆ. ಈ ಬೇಸಿಗೆ ಕಾಲದಲ್ಲಿ ಈ ಮರಗಳಲ್ಲಿ ಮಾವಿನ ಹಣ್ಣುಗಳಿದ್ದು. ಇದರಲ್ಲಿರುವ ಪ್ರತಿಯೊಂದೂ ಸುಮಾರು 2.5 ಕೆಜಿ ತೂಕವನ್ನು ಹೊಂದಿದೆಯಂತೆ. ಹಾಗೆಯೇ ಈ ಮಾವುಗಳಿಗೆ ಶರದ್ ಪವಾರ್ ಎಂದು ಹೆಸರನ್ನೂ ಇಟ್ಟಿದ್ದಾರೆ. ಸದ್ಯ ಸೊಲ್ಲಾಪುರದಲ್ಲಿ ಆಯೋಜಿಸಿದ್ದ ಮಾವು ಸಂತೆಯಲ್ಲಿ ಈ ಮಾವು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಶರದ್ ಪವಾರ್ ಹೆಸರೇಕೆ?: ಈ ಮಾವಿಗೆ ಶರದ್ ಪವಾರ್ ಹೆಸರಿಡಲು ಕಾರಣವನ್ನೂ ಗಾಡ್ಗೆ ಹೇಳಿದ್ದಾರೆ. ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಫಲ್ಬಾಗ್ ಯೋಜನೆ ಆರಂಭಿಸಿದ್ದರು. ಈ ಯೋಜನೆಯಡಿ ನಾವು 8 ಎಕರೆ ಜಮೀನಿನಲ್ಲಿ ಸುಮಾರು 7000 ಕೇಸರ್ ಮಾವಿನ ಗಿಡಗಳನ್ನು ನೆಟ್ಟಿದ್ದೇವೆ. ಆ ದಿನಗಳಲ್ಲಿ ಅವರು ನೀಡಿದ ಯೋಜನೆಯನ್ನು ಗೌರವಿಸಲು, ಬೃಹತ್ ಗಾತ್ರದ 2.5 ಕೆಜಿ ಮಾವಿಗೆ ಶರದ್ ಪವಾರ್ ಅವರ ಹೆಸರನ್ನು ಇಡಲಾಗಿದೆ ಎಂದು ಗಾಡ್ಗೆ ಹೇಳಿದರು.
ಇನ್ನು ಗಾಡ್ಗೆ ಅವರು ತಮ್ಮ ತೋಟದಲ್ಲಿ ಮುಖ್ಯವಾಗಿ ಕೇಸರಿ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತೇವೆ ಎಂದು ಹೇಳಿದ್ದಾರೆ. ಈ ಮಾವಿನ ಮರಗಳಿಗೆ ವಿವಿಧ ರೀತಿಯ ಹೋಮಿಯೋಪತಿ ಔಷಧಗಳನ್ನು ಬಳಸಲಾಗಿದೆ. ಬಾರಾಮತಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಬಾರಾಮತಿ ಕೃಷಿ ಅಭಿವೃದ್ಧಿ ಟ್ರಸ್ಟ್‌ನೊಂದಿಗೆ ಸಂಬಂಧ ಹೊಂದಿರುವ ರಾಜೇಂದ್ರ ಪವಾರ್ ಈ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.