2022ರಲ್ಲಿ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿತ್ತು. ಇಂದು 136 ದಿನಗಳ ಬಳಿಕ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆ ಸಮಾರೋಪಗೊಂಡಿದೆ. ಶ್ರೀನಗರದ ಚೆಶ್ಮಾ ಸಾಹಿಯಲ್ಲಿರುವ ಯಾತ್ರೆಯ ಶಿಬಿರದಲ್ಲಿ ರಾಹುಲ್ ರಾಷ್ಟ್ರಧ್ವಜಾರೋಹಣ ಮಾಡಿದರು. ಅವರು ಐದು ತಿಂಗಳ ಅವಧಿಯಲ್ಲಿ 12 ರಾಜ್ಯಗಳನ್ನು ಒಳಗೊಂಡ 4,000 ಕಿಮೀ ಪಾದಯಾತ್ರೆಗೆ ಇಂದು ತೆರೆ ಎಳೆದರು.