ಶ್ರೀನಗರದಲ್ಲಿ ಪೊಲೀಸರ ಬಸ್ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ, 10 ಮಂದಿಗೆ ಗಾಯ

Terror Attack : ಜಮ್ಮು-ಕಾಶ್ಮೀರದಲ್ಲಿ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಶ್ರೀನಗರದ ಹೊರವಲಯದಲ್ಲಿರುವ ಝೆವಾನ್ನಲ್ಲಿ ಪೊಲೀಸ್ ಶಿಬಿರದ ಬಳಿ ಇಬ್ಬರು ಭಯೋತ್ಪಾದಕರು ಪೊಲೀಸ್ ಬಸ್ನ ಮೇಲೆ ದಾಳಿ ಮಾಡಿದ್ದಾರೆ.

First published:

 • 15

  ಶ್ರೀನಗರದಲ್ಲಿ ಪೊಲೀಸರ ಬಸ್ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ, 10 ಮಂದಿಗೆ ಗಾಯ

  ದಾಳಿಯಲ್ಲಿ ಇಬ್ಬರು ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪಡೆಯ ಇಬ್ಬರು ಪೊಲೀಸ್ ಹುತಾತ್ಮರಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  MORE
  GALLERIES

 • 25

  ಶ್ರೀನಗರದಲ್ಲಿ ಪೊಲೀಸರ ಬಸ್ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ, 10 ಮಂದಿಗೆ ಗಾಯ

  ಮೃತರಲ್ಲಿ ಒಬ್ಬರು ಸಹಾಯಕ ಸಬ್ ಇನ್ಸ್ ಪೆಕ್ಟರ್ ಮತ್ತು ಇನ್ನೊಬ್ಬರು ಸೆಕ್ಷನ್ ಗ್ರೇಡ್ ಕಾನ್ ಸ್ಟೆಬಲ್ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.

  MORE
  GALLERIES

 • 35

  ಶ್ರೀನಗರದಲ್ಲಿ ಪೊಲೀಸರ ಬಸ್ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ, 10 ಮಂದಿಗೆ ಗಾಯ

  ವಿವಿಧ ಭದ್ರತಾ ಪಡೆಗಳ ಹಲವಾರು ಶಿಬಿರಗಳನ್ನು ಹೊಂದಿರುವ ಅತ್ಯಂತ ಸುರಕ್ಷಿತ ಪ್ರದೇಶವಾದ ಝೆವಾನ್ ನಲ್ಲಿ ಭಯೋತ್ಪಾದಕರು ಬಸ್ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

  MORE
  GALLERIES

 • 45

  ಶ್ರೀನಗರದಲ್ಲಿ ಪೊಲೀಸರ ಬಸ್ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ, 10 ಮಂದಿಗೆ ಗಾಯ

  ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಭಯೋತ್ಪಾದಕ ದಾಳಿಯ ಬಗ್ಗೆ ವಿವರವನ್ನು ಕೇಳಿದ್ದಾರೆ.

  MORE
  GALLERIES

 • 55

  ಶ್ರೀನಗರದಲ್ಲಿ ಪೊಲೀಸರ ಬಸ್ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ, 10 ಮಂದಿಗೆ ಗಾಯ

  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಕೂಡ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

  MORE
  GALLERIES