Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

First published:

  • 110

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಸಾವೊ ಪಾಲೊ - ಬ್ರೆಜಿಲ್​ನ ಆರ್ಥಿಕ ರಾಜಧಾನಿ ಹಾಗೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 10 ನಗರಗಳಲ್ಲಿ ಒಂದಾದ ಸಾವೊ ಪಾಲೊ ಶೀಘ್ರದಲ್ಲೇ ನೀರಿನ ಅಭಾವ ಎದುರಿಸುತ್ತಿರುವ ನಗರ ಎಂಬ ಖ್ಯಾತಿ ಪಡೆಯಬಹುದು. ಪ್ರಸ್ತುತ ಕೇಪ್​​ಟೌನ್​ ನಗರದಲ್ಲಿ ನೀರಿನ ಸಮಸ್ಯೆಯಿದ್ದು, ಇದಕ್ಕಿಂತ ದೊಡ್ಡ ಸಮಸ್ಯೆ ಸಾವೊ ಪಾಲೊ ನಗರದಲ್ಲಿ ಬಂದೆರೆಗಲಿದೆ ಎಂದು ಹೇಳಲಾಗಿದೆ. ಈ ನಗರ ಅಂತರ್ಜಲದ ಮಟ್ಟವು ನಿರಂತರವಾಗಿ ಕುಸಿಯುತ್ತಿದ್ದು, ಪರಿಣಾಮ ಇಲ್ಲಿನ ನಿವಾಸಿಗಳಿಗೆ ತಿಂಗಳಲ್ಲಿ ಕೇವಲ 20 ದಿನಗಳು ಮಾತ್ರ ನೀರು ಪೂರೈಸಲಾಗುತ್ತಿದೆ. ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಡಲಿದ್ದು, ಈಗಾಗಲೇ ನೀರಿನ ಟ್ಯಾಂಕ್​ಗಳ ರಕ್ಷಣೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.

    MORE
    GALLERIES

  • 210

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಬೆಂಗಳೂರು - ದಕ್ಷಿಣ ಭಾರತದಲ್ಲಿ ಚೆನ್ನೈ ಹೊರತುಪಡಿಸಿ, ಈಗ ಬೆಂಗಳೂರು ಮಹಾನಗರ ಕೂಡ ನೀರಿನ ಸಮಸ್ಯೆಯತ್ತ ಹೊರಳಿದೆ. ಸಿಲಿಕಾನ್ ಸಿಟಿಯ ಪ್ರಸ್ತುತ ಪರಿಸ್ಥಿತಿ ತುಂಬಾ ಹದಗೆಡುವ ಸ್ಥಿತಿಯಲ್ಲಿದ್ದು, ಹೊಸ ಕಟ್ಟಡಗಳನ್ನು ನಿರ್ಮಾಣ ಸೇರಿದಂತೆ ಅನೇಕ ಕಾರ್ಯಗಳಿಗೆ ನೀರಿಗೆ ಅಭಾವ ಕಾಡುತ್ತಿದೆ. ಮತ್ತೊಂದೆಡೆ, ಹಳೆಯ ಕೊಳವೆಗಳಿಂದಾಗಿ ನೀರು ಕೂಡ ವ್ಯರ್ಥವಾಗುತ್ತಿದೆ. ದಿನ ಕಳೆದಂತೆ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ನೀರಿನ ಕೊರತೆಯಿಂದ ನೀಗಿಸಲು ಮೊದಲು ನೀರು ಸರಬರಾಜು ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಿದೆ. ಇನ್ನು ನಗರದ ಸುತ್ತಮುತ್ತಲಿರುವ ಕಾಲುವೆ ಹಾಗೂ ಕೆರೆಗಳು ಸಂಪೂರ್ಣವಾಗಿ ಕಲುಷಿತಗೊಂಡಿರುವುದು ಸಹ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನುಂಟು ಮಾಡಲಿದೆ. ಮಹಾನಗರದ ಜನರು ಕಾವೇರಿ ನೀರನ್ನು ಮಾತ್ರ ನೆಚ್ಚಿಕೊಳ್ಳುತ್ತಿರುವುದು 2025ರ ವೇಳೆಗೆ ದೊಡ್ಡ ಸಮಸ್ಯೆಗೆ ಮುನ್ನುಡಿ ಬರೆಯಲಿದೆ ಎಂದು ಹೇಳಲಾಗಿದೆ.

    MORE
    GALLERIES

  • 310

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಕೈರೋ- ಈಜಿಪ್ಟ್​ನ ಈ ಐತಿಹಾಸಿಕ ನಗರ ಕೂಡ ನೀರಿನ ಕೊರತೆಗೆ ಸಾಕ್ಷಿಯಾಗಿದೆ. ಇಲ್ಲಿ ನೈಲ್‌ ನದಿಯಿದ್ದರೂ, ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ಜನಸಂಖ್ಯೆಯಿಂದ ಸಮಸ್ಯೆ ತಲೆದೂರಿದೆ. ಈ ನಗರದ ಕೊಳಚೆ ನೀರಿನ ಸರಿಯಾದ ನಿರ್ವಹಣೆಯ ಕೊರತೆಯಿಂದಾಗ ಅನೇಕ ಭಾಗದಲ್ಲಿ ನೀರು ಕಲುಷಿತವಾಗಿದೆ. 2025 ರ ಹೊತ್ತಿಗೆ ಕೈರೋ ನಗರಕ್ಕೆ ಮಾತ್ರವಲ್ಲ, ಇಡೀ ಈಜಿಪ್ಟ್‌ನಲ್ಲೂ ತೀವ್ರ ನೀರಿನ ಅಭಾವ ಕಾಡಲಿದೆ ಎಂದು ಯುಎನ್ ವರದಿ ಮಾಡಿದೆ.

    MORE
    GALLERIES

  • 410

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಟೋಕಿಯೊ - ಜಪಾನ್‌ನ ರಾಜಧಾನಿ ಮತ್ತು ಪ್ರಮುಖ ವಾಣಿಜ್ಯ ನಗರವಾದ ಟೋಕಿಯೊ ಕೂಡ ಅಂತರ್ಜಲದ ಸಮಸ್ಯೆಯನ್ನು ಅನುಭವಿಸುತ್ತಿದೆ. ಇಲ್ಲಿ ಸಾಕಷ್ಟು ನೀರು ಇದ್ದರೂ ಅದು ಅಮೆರಿಕದ ಸಿಯಾಟಲ್‌ ನಗರಕ್ಕೆ ಸಾಕಾವಷ್ಟು ಮಾತ್ರವಾಗಿದೆ. ಏಕೆಂದರೆ ಒಂದು ನಗರಕ್ಕೆ ಬಳಸಲಾಗುವ ನೀರನ್ನು ಒಂದು ಇಡೀ ದೇಶ ಬಳಸಬೇಕಾದ ಪರಿಸ್ಥಿತಿ ಜಪಾನ್​ಗೆ ಮುಂದಿದೆ. ಈ ದೇಶದಲ್ಲಿ ನೀರಿನ ಲಭ್ಯತೆ ಕೇವಲ 4 ತಿಂಗಳುಗಳು ಮಾತ್ರ. ಕಾರಣ ಇಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಗಳು ಇಲ್ಲ. ಹೀಗಾಗಿ ಹೆಚ್ಚಿನ ಜನರು ಕುಡಿಯುವ ನೀರಿಗಾಗಿ ಮಂಜುಗಡ್ಡೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಪಾನ್ ಸರ್ಕಾರ ಕೆಲ ವರ್ಷಗಳ ಹಿಂದೆ, ಮಳೆನೀರನ್ನು ಉಳಿಸುವ ಯೋಜನೆಗೆ ಚಾಲನೆ ನೀಡಿದೆ.

    MORE
    GALLERIES

  • 510

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಮೆಕ್ಸಿಕೊ ನಗರ - ಮೆಕ್ಸಿಕೊ ನಗರ ಸ್ಥಿತಿ ಸಹ ಭಿನ್ನವಾಗಿಲ್ಲ. ಸುಮಾರು 2.1 ಕೋಟಿ ಜನಸಂಖ್ಯೆ ಹೊಂದಿರುವ ಈ ನಗರದಲ್ಲಿ ನೀರನ್ನು ಟ್ಯಾಂಕ್‌ಗಳಲ್ಲಿ ತುಂಬಿಡಲಾಗುತ್ತಿದೆ. ಈ ಮೂಲಕ ವಾರದಲ್ಲಿ ಕೆಲವೇ ಗಂಟೆಗಳ ಕಾಲ ಮಾತ್ರ ನೀರು ಸರಬರಾಜು ಮಾಡಲಾಗುತ್ತದೆ. ಇನ್ನು ನೀರಿಗಾಗಿ ಮೆಕ್ಸಿಕೊ ಪರ್ಯಾಯ ಮಾರ್ಗವನ್ನು ರೂಪಿಸಿಲ್ಲ. ಇನ್ನು ನಗರದ ಕೊಳವೆಗಳು ಕೆಟ್ಟ ಸ್ಥಿತಿಯಲ್ಲಿದ್ದು, ಇದರಿಂದ ಸಹ ಸಾಕಷ್ಟು ನೀರು ಸರಬರಾಜು ವೇಳೆ ವ್ಯರ್ಥವಾಗುತ್ತಿದೆ.

    MORE
    GALLERIES

  • 610

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಜಕರ್ತಾ - ಇಂಡೋನೇಷ್ಯಾದ ಈ ನಗರವು ನೀರಿನಿಂದ ಸಮಸ್ಯೆಯಿಂದ ತತ್ತರಿಸುವ ಹೋಗಲಿದೆ ಎನ್ನಲಾಗುತ್ತಿದೆ. ಜನಸಂಖ್ಯೆಯ ಬೆಳವಣಿಗೆಯೊಂದಿಗೆ ಈ ದೇಶದಲ್ಲಿ ನೀರು ಪೂರೈಕೆಗೆ ಆಧುನಿಕ ವ್ಯವಸ್ಥೆ ರೂಪಿಸಲಾಗಿಲ್ಲ. ಹೀಗಾಗಿ ಹೆಚ್ಚಿನವರು ಅಂರ್ಜಲದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಅಂತರ್ಜಲದ ಮಟ್ಟವು ಇಳಿಮುಖವಾಗುತ್ತಿದೆ. ವಿಶ್ವಬ್ಯಾಂಕ್ ವರದಿ ಪ್ರಕಾರ, ಇಲ್ಲಿ ನೀರಿನ ಮಟ್ಟವು ಸಿ ಮಟ್ಟಕ್ಕಿಂತ ಕೆಳಗಿದ್ದು, ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವಂತಹ ಸ್ಥಿತಿ ತಲೆದೂರಬಹುದು.

    MORE
    GALLERIES

  • 710

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಮಾಸ್ಕೋ - ವಿಶ್ವದ ಸಿಹಿ ನೀರಿನ ಕಾಲು ಭಾಗ ರಷ್ಯಾದಲ್ಲಿದೆ. ಆದರೂ ಮಾಸ್ಕೋ ನಗರ ಮಾತ್ರ ನೀರಿನಿಂದ ಕೊರತೆಗೆ ಸಾಕ್ಷಿಯಾಗಿದೆ. ಮಹಾನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾರ್ಖಾನೆಗಳು ಮತ್ತು ಜನಸಂಖ್ಯೆಯಿಂದಾಗಿ, ರಷ್ಯಾದಲ್ಲಿ ಹಾಗೆಯೇ ವಿಶೇಷವಾಗಿ ಮಾಸ್ಕೋದಲ್ಲಿ ಶೇಕಡಾ 70 ರಷ್ಟು ಜನಸಂಖ್ಯೆಯು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ರಷ್ಯಾದಲ್ಲಿ ಸರಬರಾಜು ಮಾಡುವ ನೀರಿನ ಶೇಕಡಾ 60 ರಷ್ಟು ನೈರ್ಮಲ್ಯ ಗುಣಮಟ್ಟಕ್ಕಿಂತ ಕೆಳಗಿವೆ ಎಂದು ಹೇಳಲಾಗಿದೆ.

    MORE
    GALLERIES

  • 810

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಇಸ್ತಾಂಬುಲ್ - ಟರ್ಕಿಯ ರಾಜಧಾನಿ ಸುಂದರ ನಗರಕ್ಕೂ ನೀರಿನ ಸಮಸ್ಯೆ ತಟ್ಟಿದೆ. 2016 ರ ಅಂಕಿ ಅಂಶದ ಪ್ರಕಾರ ಈ ನಗರದಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 1700 ಕ್ಯೂಬಿಕ್ ಮೀಟರ್ ನೀರಿನ ಅವಶ್ಯಕತೆಯಿದೆ. ಆದರೆ ಈ ಪ್ರಮಾಣದಲ್ಲಿ ಭಾರೀ ಇಳಿಕೆಯಾಗುತ್ತಿರುವುದರಿಂದ 2030 ರ ವೇಳೆಗೆ ದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

    MORE
    GALLERIES

  • 910

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಲಂಡನ್ - ಬ್ರಿಟನ್‌ನ ರಾಜಧಾನಿ ಲಂಡನ್​ನಲ್ಲಿ ಯಾವಾಗ ಬೇಕಾದರೂ ಮಳೆಯಾಗುತ್ತದೆ. ಆದರೆ ಮಳೆ ನೀರಿನ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ, ಈ ನಗರವು ನೀರಿನ ಕೊರತೆಯ ವ್ಯಾಪ್ತಿಗೆ ಒಳಪಟ್ಟಿದೆ. ಹವಾಮಾನ ಬದಲಾವಣೆಯಿಂದಾಗಿ, ಅನೇಕ ಭಾಗದಲ್ಲಿ ನೀರು ಸರಬರಾಜು ಕೊಳವೆಗಳು ಕೆಟ್ಟು ಹೋಗಿವೆ. ಅವುಗಳನ್ನು ದುರಸ್ತಿ ಮಾಡದ ಕಾರಣ, ಸಾಕಷ್ಟು ನೀರು ವ್ಯರ್ಥವಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಲಂಡನ್ ನಗರ ಸಹ ನೀರಿನ ಅಭಾವದ ಸಮಸ್ಯೆಯನ್ನು ಎದುರುಹಾಕಿಕೊಳ್ಳಬಹುದು.

    MORE
    GALLERIES

  • 1010

    Mission Paani: ಈ ಹತ್ತು ನಗರಗಳಲ್ಲಿ ನೀರಿಗಾಗಿ ಹಾಹಾಕಾರ: ಬೆಚ್ಚಿಬೀಳಿಸಿದ ವರದಿ..!

    ಮಿಯಾಮಿ - ಸಾಕಷ್ಟು ಮಳೆಯಾಗುವ ಅಮೆರಿಕದ ಕೆಲವೇ ನಗರಗಳಲ್ಲಿ ಇದು ಒಂದು. ಇದರ ಹೊರತಾಗಿಯೂ, ನೀರಿನ ಕೊರತೆ ಇಲ್ಲಿ ಸಾಮಾನ್ಯವಾಗಿದೆ. 20ನೇ ಶತಮಾನದಲ್ಲಿ, ಸೆಂಚುರಿ ಯೋಜನೆಯು ಇಲ್ಲಿ ಸಿಹಿನೀರಿನ ಮೂಲಗಳ ಮೇಲೆ ತೀವ್ರ ಪರಿಣಾಮ ಬೀರಿತು. Biscayne Aquifer ಕೊಲ್ಲಿಯು ಅಟ್ಲಾಂಟಿಕ್ ಸಮುದ್ರದೊಂದಿಗೆ ಸೇರಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಆರಂಭವಾಯಿತು ಎನ್ನಲಾಗಿದೆ. ಏಕೆಂದರೆ ಬಿಸ್ಕೆನ್ ಅಕ್ವೈಫರ್​ ಈ ನಗರದ ಕುಡಿಯುವ ನೀರಿನ ಹಾಗೂ ನೀರು ಸರಬರಾಜಿಗೆ ಮೂಲವಾಗಿತ್ತು.

    MORE
    GALLERIES