ಹೈದರಾಬಾದ್ ಒಂದರಲ್ಲೇ ಮಳೆಯಿಂದ 18 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್ನ ಬಹುತೇಕ ಭಾಗ ಮುಳುಗಿಹೋಗಿದೆ. ರಸ್ತೆ, ಮನೆ, ಕಚೇರಿಗಳು, ದೇವಸ್ಥಾನಗಳು ಎಲ್ಲಾ ಕಡೆಯೂ ಮಳೆನೀರು ನುಗ್ಗಿರುವುದರಿಂದ ಜನರು ಪ್ರಾಣಾಪಾಯದ ಭೀತಿಯಲ್ಲಿದ್ದಾರೆ. ಬುಧವಾರ ಹೈದರಾಬಾದ್ನ ಬಂದ್ಲಗುಡ ಪ್ರದೇಶದಲ್ಲಿ ಮಗು ಸೇರಿದಂತೆ 9 ಮಂದಿ ಮೃತ ಪಟ್ಟಿದ್ದಾರೆ.