ಆದರೆ ಒಂದೇ ಮುಹೂರ್ತದಲ್ಲಿ ಒಬ್ಬ ವ್ಯಕ್ತಿ ಇಬ್ಬರು ವಧುವಿಗೆ ತಾಳಿ ಕಟ್ಟುವುದನ್ನು ನೋಡಿರುತ್ತೀರಾ? ಬಹುಶಃ ಇಂತಹ ನಿದರ್ಶನ ತುಂಬಾ ವಿರಳ ಎನ್ನಬಹುದು. ಎರಡು ಮದುವೆಯಾದವರು ಸಾಕಷ್ಟು ಜನರಿದ್ದಾರೆ, ಆದರೆ ಅವರು ಬೇರೆ ಬೇರೆ ದಿನಗಳಲ್ಲಿ ಮದುವೆಯಾಗಿರುತ್ತಾರೆ. ಆದರೆ ಒಂದೇ ದಿನ, ಒಂದೇ ಮುಹೂರ್ತದಲ್ಲಿ ಮದುವೆಯಾಗುವುದೆಂದರೆ ನಿಜಕ್ಕೂ ಆಶ್ಚರ್ಯವೇ ಸರಿ, ಇಂತಹದೊಂದು ಘಟನೆ ತೆಲಂಗಾಣದಲ್ಲಿ ನಡೆದಿದೆ.