Telangana Flood: ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡಿದ ಟಾಲಿವುಡ್​ ನಟರು..!

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣದ ಜನರ ಜೀವನ ಸಂಪೂರ್ಣವಾಗಿ ತತ್ತರಿಸಿದೆ. ಪ್ರವಾಹದಿಂದಾಗಿ ಸಾಕಷ್ಟು ಜನ ಮನೆಮಠ-ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಅನೇಕ ಜನ ಮಳೆಗೆ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ತೆಲಂಗಾಣ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುವಂತಾಗಿದೆ. ಅಲ್ಲದೆ, ಸರ್ಕಾರಕ್ಕೂ ಇದರಿಂದಾಗಿ ಸಾವಿರಾರು ಕೋಟಿ ನಷ್ಟವಾಗಿದೆ. ಈಗಾಗಲೇ ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಟಾಲಿವುಡ್​ ಸ್ಟಾರ್​ಗಳು ತೆಲಂಗಾಣ ರಾಜ್ಯದ ಬೆನ್ನಿಗೆ ನಿಂತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: