CBSE Result: ಸಿಬಿಎಸ್​​ಇ 12th ಟಾಪರ್! 500ಕ್ಕೆ 500 ಸ್ಕೋರ್ ಮಾಡಿದ ತಾನ್ಯಾ

CBSE 12th Topper Tanya Singh from Bulandshahr: ಉತ್ತರ ಪ್ರದೇಶದ ಬುಲಂದ್‌ಶಹರ್ ಅವರ ಪುತ್ರಿ ಸಿಬಿಎಸ್‌ಇ 12ನೇ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಬುಲಂದ್‌ಶಹರ್‌ನ ತಾನ್ಯಾ ಸಿಂಗ್ ಅವರು CBSE ಬೋರ್ಡ್ ಪರೀಕ್ಷೆಯಲ್ಲಿ ಪರಿಪೂರ್ಣ 500 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ದೆಹಲಿ ಪಬ್ಲಿಕ್ ಸ್ಕೂಲ್‌ನ 12 ನೇ ತರಗತಿ ವಿದ್ಯಾರ್ಥಿನಿ ತಾನ್ಯಾ ಸಿಂಗ್ 500 ಕ್ಕೆ 500 ಅಂಕಗಳನ್ನು ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ, ತಾನ್ಯಾ ಸಿಂಗ್ ಇಂಗ್ಲಿಷ್, ಇತಿಹಾಸ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಂಗೀತದಲ್ಲಿ 100 ಶೇಕಡಾ ಅಂಕಗಳನ್ನು ಪಡೆದಿದ್ದಾರೆ. CBSE ಅಂದರೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 12ನೇ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಬಿಡುಗಡೆ ಮಾಡಿದೆ.

First published: