ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ತನ್ನ ವಿಚ್ಛೇದನ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿದ್ದ ಮಹಿಳೆ ಮೇಲೆ ಆಕೆಯ ಪತಿಯೇ ಹಲವು ಬಾರಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)
2/ 7
ಪೊಲೀಸರು ಪತಿಯನ್ನು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋರ್ಟ್ ಬಳಿಯೇ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಸುಧಾ ಮತ್ತು ಕಾಮರಾಜ್ ಎಂಬ ದಂಪತಿ ಕಾಕತಾಳೀಯವಾಗಿ ಒಂದೇ ಬಸ್ನಲ್ಲಿ ಪ್ರಯಾಣಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)
4/ 7
ನ್ಯಾಯಾಲಯದ ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ, ಗಂಡ ಚಾಕುವನ್ನು ಹೊರತೆಗೆದು ಅನೇಕ ಬಾರಿ ಇರಿದಿದ್ದಾನೆ ಎಂದು ಪೆರಂಬಲೂರಿನ ಪೊಲೀಸ್ ಅಧೀಕ್ಷಕ ಎಸ್ ಮಣಿ ಹೇಳಿದರು.
5/ 7
ಕಾಮರಾಜ್ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದೇವೆ ಎಂದು ಎಸ್ಪಿ ಮಣಿ ತಿಳಿಸಿದ್ದಾರೆ. ಅದೇ ಬಸ್ನಿಂದ ಕೆಳಗಿಳಿದ ಪೊಲೀಸರು ಮತ್ತು ನ್ಯಾಯಾಲಯದ ಹೊರಗೆ ಕರ್ತವ್ಯದಲ್ಲಿದ್ದ ಮತ್ತೊಬ್ಬರು ಆರೋಪಿಯನ್ನು ಬೆನ್ನೆತ್ತಿ ಬಂಧಿಸಿದ್ದಾರೆ (ಸಾಂದರ್ಭಿಕ ಚಿತ್ರ)
6/ 7
ಸದ್ಯ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿಗಳು ಹಲವಾರು ವರ್ಷಗಳಿಂದ ತಮ್ಮ ವಿಚ್ಛೇದನದ ಪ್ರಕರಣದಲ್ಲಿ ಹೋರಾಡುತ್ತಿದ್ದರು. ಡಿವೋರ್ಸ್ ಅಂತಿಮ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
7/ 7
ವಿಚ್ಛೇದನ ಪ್ರಕರಣದಿಂದ ಬೇಸತ್ತಿದ್ದ ಕಾಮರಾಜ್ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ. ತನಿಖೆಯಿಂದ ನಿಕರ ಕಾರಣ ತಿಳಿದು ಬರಬೇಕಿದೆ. (ಸಾಂದರ್ಭಿಕ ಚಿತ್ರ)