Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

ಡಿಎಂಕೆ ಪಾಲಿಗೆ ಕ್ರಾಂತಿಕಾರಕ ಯೋಜನೆ ಎಂದೇ ಬಿಂಬಿತವಾಗಿರುದ್ದ ಮಗಳಿರ್‌ ಉರಿಮೈ ತೊಗೈ (ನೆರವು ಮಹಿಳೆಯರ ಹಕ್ಕು) ಯೋಜನೆಯನ್ನು ಡಿಎಂಕೆ ಸೋಮವಾರ ಘೋಷಿಸಿದ್ದು ಅರ್ಹ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಒಂದು ಸಾವಿರ ನೆರವು ನೀಡಲಾಗುವುದು ಎಂದು ತಿಳಿಸಿದೆ.

  • Local18
  • |
  •   | Chennai, India
First published:

  • 18

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದಂತೆ ತಮಿಳುನಾಡು ಸರ್ಕಾರ ಕುಟುಂಬದ ಯಜಮಾನಿಗೆ 1000 ರೂ ನೆರವು ನೀಡುವುದಾಗಿ 2023ರ ಬಜೆಟ್​ನಲ್ಲಿ ಘೋಷಣೆ ಮಾಡಿದೆ. ಸೆಪ್ಟೆಂಬರ್​ನಲ್ಲಿ ಜಾರಿಗೆ ಬರಲಿದೆ.

    MORE
    GALLERIES

  • 28

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    ಡಿಎಂಕೆ ಪಾಲಿಗೆ ಕ್ರಾಂತಿಕಾರಕ ಯೋಜನೆ ಎಂದೇ ಬಿಂಬಿತವಾಗಿರುದ್ದ ಮಗಳಿರ್‌ ಉರಿಮೈ ತೊಗೈ (ನೆರವು ಮಹಿಳೆಯರ ಹಕ್ಕು) ಯೋಜನೆಯನ್ನು ಡಿಎಂಕೆ ಸೋಮವಾರ ಘೋಷಿಸಿದ್ದು ಅರ್ಹ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ಒಂದು ಸಾವಿರ ನೆರವು ನೀಡಲಾಗುವುದು ಎಂದು ತಿಳಿಸಿದೆ.

    MORE
    GALLERIES

  • 38

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್‌ ಅವರು ಸೋಮವಾರ 2023–24ನೇ ಸಾಲಿನ ಬಜೆಟ್‌ನಲ್ಲಿ ಈ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.

    MORE
    GALLERIES

  • 48

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    ಸೆಪ್ಟೆಂಬರ್​ 15ರಂದು ಡಿಎಂಕೆ ಸಂಸ್ಥಾಪಕ, ದಿವಂಗತ ಸಿಎನ್​ ಅಣ್ಣಾದೊರೈ ಜನ್ಮ ದಿನದಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಈ ಯೋಜನೆಯನ್ನು ಜಾರಿಗೊಳಿಸಲಿದ್ದಾರೆ.

    MORE
    GALLERIES

  • 58

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಪ್ರಮುಖ ಯೋಜನೆ ಜಾರಿಗೊಳಿಸುವ ಮೂಲಕ ಡಿಎಂಕೆ ತಮಿಳುನಾಡಿನ ಎಲ್ಲಾ 39 ಸ್ಥಾನಗಳು ತನ್ನದಾಗಿಸಿಕೊಳ್ಳಲು ತಂತ್ರ ರೂಪಿಸಿಕೊಂಡಿದೆ.

    MORE
    GALLERIES

  • 68

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    ಇನ್ನು ಈ ಯೋಜನೆಗಾಗಿ 2023ರ ಬಜೆಟ್‌ನಲ್ಲಿ 7 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ರಾಜ್ಯದ ಮಹಿಳೆಯರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಇದು ಸಹಕಾರಿಯಾಗಲಿದೆ ಎಂದು ಸಚಿವ ತ್ಯಾಗರಾಜನ್‌ ಮಾಹಿತಿ ನೀಡಿದ್ದಾರೆ.

    MORE
    GALLERIES

  • 78

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    2021ರ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಡಿಎಂಕೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ 1000 ರೂಪಾಯಿಗಳನ್ನು ನೀಡುತ್ತೇವೆ ಎಂದು ಘೋಷಣೆ ಮಾಡಿತ್ತು. ಡಿಎಂಕೆ ಈ ಭರವಸೆ ಮೂಲಕ ಭಾರಿ ಜನಪ್ರಿಯತೆ ಪಡೆದಿತ್ತು.

    MORE
    GALLERIES

  • 88

    Tamil Nadu Budget: ಲೋಕಸಭಾ ಚುನಾವಣೆಗೆ ಮಾಸ್ಟರ್ ಪ್ಲಾನ್! ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ ಸ್ಟ್ಯಾಲಿನ್ ಸರ್ಕಾರ!

    ಕರ್ನಾಟಕದಲ್ಲೂ ಕೂಡ ಇದೇ ರೀತಿಯ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಪ್ರತಿ ತಿಂಗಳು ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ ಪ್ರತಿ ತಿಂಗಳು 2000 ರೂಪಾಯಿ ನೀಡುವುದಾಗಿ ತಿಳಿಸಿದೆ. ಇನ್ನು ರಾಜ್ಯ ಸರ್ಕಾರ ಈ ವರ್ಷದ ಬಜೆಟ್​ನಲ್ಲಿ ಮಹಿಳಾ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂ ಸಹಾಯಧನ ಘೋಷಿಸಿದೆ.

    MORE
    GALLERIES