Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

Tallest Statues In India: ಪ್ರತಿಮೆಗಳು ಇತಿಹಾಸವನ್ನು ತಿಳಿಸುತ್ತವೆ. ಇತಿಹಾಸ ಗತಕಾಲದ ನೆನಪುಗಳನ್ನು ಮರಳಿ ತರುವಲ್ಲಿ ಪ್ರತಿಮೆಗಳು ಸಹಕಾರಿ. ಹೀಗಾಗಿಯೇ ಪ್ರಪಂಚದಾದ್ಯಂತ ಸಾಧನೆ ಮಾಡಿದ ಮಹಾತ್ಮರು, ಇತಿಹಾಸದ ಪುಟದಲ್ಲಿ ದಾಖಲಾದ ಕೆಲವೊಂದು ಪ್ರಮುಖ ನಾಯಕರು ಹಾಗೂ ದೇವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.

First published:

  • 110

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ನರ್ಮದಾ ಸರೋವರ ಅಣೆಕಟ್ಟಿನ ಬಳಿ ಇರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ  ಗುಜರಾತ್ ರಾಜ್ಯದ ಪ್ರಮುಖ ಆಕರ್ಷಣೆಯಾಗಿದೆ. ಈ ಏಕತಾ ಪ್ರತಿಮೆ 597 ಅಡಿ ಎತ್ತರವಿದೆ. ಪ್ರತಿಮೆಯು ಅಮೆರಿಕದಲ್ಲಿರುವ 'ಸ್ಟ್ಯಾಚ್ಯೂ ಆಫ್ ಲಿಬರ್ಟಿ'ಗಿಂತಲೂ ಎತ್ತರವಿದೆ.

    MORE
    GALLERIES

  • 210

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ಸಮಾನತೆಯ ಪ್ರತಿಮೆ ಎಂದು ಕರೆಯಲ್ಪಡುವ ಸಂತ  ಶ್ರೀ ರಾಮಾನುಜಾರ್ಯರ ಪ್ರತಿಮೆ ಹೈದರಾಬಾದ್‌ನಲ್ಲಿದೆ. ಇದರ ಎತ್ತರ 216 ಅಡಿ ಇದೆ. ಕುಳಿತುಕೊಳ್ಳುವ ರೀತಿಯಲ್ಲಿ ಇರುವ ವಿಶ್ವದ ಅತ್ಯಂತ ಎರಡನೇ ಎತ್ತರದ ಪ್ರತಿಮೆಯಾಗಿದೆ. ರಾಮಾನುಜಾಚಾರ್ಯರ ಮೂರ್ತಿ ಹೈದರಾಬಾದಿನ ಮುಚ್ಚಿಂತಲ್ ಪ್ರದೇಶದಲ್ಲಿದೆ.

    MORE
    GALLERIES

  • 310

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮಡಪಂನಲ್ಲಿರುವ ಭಗವಾನ್ ಹನುಮಾನ್ ಪ್ರತಿಮೆ ವಿಶ್ವದಲ್ಲಿ ಇರುವ ಅತ್ಯಂತ ಎತ್ತರವಾದ ಹನುಮಾನ್ ಮೂರ್ತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 171 ಅಡಿಯಿದೆ.

    MORE
    GALLERIES

  • 410

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ಕರ್ನಾಟಕದ ತುಮಕೂರಿನಲ್ಲಿ ಪಂಚಮುಖಿ ಹನುಮಂತನ ಎತ್ತರದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹದ ಎತ್ತರ 161 ಅಡಿ.ಇಡೀ ಭಾರತದಾದ್ಯಂತ ಅನೇಕ ಹನುಮಾನ್ ಭಕ್ತರಿದ್ದಾರೆ. ಭಾರತದಲ್ಲಿ ಮಾರುತಿಯ ಹಲವು ವಿಧದ ವಿಗ್ರಹಗಳಿವೆ. ಅವುಗಳಲ್ಲಿ ಪಂಚಮುಖಿ ಹನುಮಂತನ ವಿಗ್ರಹವು ಅನೇಕ ದೇವಾಲಯಗಳಲ್ಲಿ ಕಂಡುಬರುತ್ತದೆ.

    MORE
    GALLERIES

  • 510

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ದಕ್ಷಿಣ ರಾಜ್ಯವಾದ ತಮಿಳುನಾಡು ಕೂಡ 146 ಅಡಿ ಮುರುಗಸ್ವಾಮಿಯ ವಿಗ್ರಹವನ್ನು ಹೊಂದಿದೆ. ತಮಿಳುನಾಡಿನಲ್ಲಿ ಮುರುಗನಸ್ವಾಮಿ ಅಂದರೆ ಕಾರ್ತಿಕೇಯನ ಅನೇಕ ಭಕ್ತರಿದ್ದಾರೆ. ಕಾರ್ತಿಕೇಯನನ್ನು ಪಾರ್ವತಿ ಮತ್ತು ಶಂಕರನ ಮೊದಲ ಮಗ ಮತ್ತು ಗಣಪತಿಯ ಸಹೋದರ ಎಂದು ಕರೆಯಲಾಗುತ್ತದೆ.

    MORE
    GALLERIES

  • 610

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ದೇಶದಲ್ಲಿ ಮಾತಾ ವೈಷ್ಣೋ ದೇವಿಯ ಅನೇಕ ಭಕ್ತರಿದ್ದಾರೆ. ಉತ್ತರ ಪ್ರದೇಶದ ವೃಂದಾವನದಲ್ಲಿ 141 ಅಡಿ ಎತ್ತರದ ಮಾ ವೈಷ್ಣೋ ದೇವಿಯ ವಿಗ್ರಹವಿದೆ.

    MORE
    GALLERIES

  • 710

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ಆಂಧ್ರಪ್ರದೇಶದ ವಿಜಯವಾಡದ ಜಿಲ್ಲೆಯ ಪರಿಟಾಲ ಗ್ರಾಮದಲ್ಲಿದಿರುವ ಆಂಜನೇಯ ಪ್ರತಿಮೆ ವಿಶ್ವದ 2 ನೇ ಅತಿ ಎತ್ತರದ ಹನುಮಾನ್ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವೀರ ಅಭಯ ಆಂಜನೇಯ ಸ್ವಾಮಿ ಪ್ರತಿಮೆ 171 ಅಡಿ ಎತ್ತರವಿದೆ.

    MORE
    GALLERIES

  • 810

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ತಮಿಳು ತತ್ವಜ್ಞಾನಿ ತಿರುಕ್ಕುರಲ್‌ನ ಲೇಖಕ ತಿರುವಳ್ಳುವರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗಿದೆ. ತಿರುವಳ್ಳುವರ್ ಪ್ರಸಿದ್ಧ ತಮಿಳು ಕವಿ. ಈ ಪ್ರತಿಮೆಯನ್ನು ಕನ್ಯಾಕುಮಾರಿ ಸಮುದ್ರದಲ್ಲಿ ಸ್ವಲ್ಪ ದೂರದ ದೊಡ್ಡ ಬಂಡೆಯ ಮೇಲೆ ಸ್ಥಾಪಿಸಲಾಗಿದೆ.

    MORE
    GALLERIES

  • 910

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ಸಿಕ್ಕಿಂ ರಾಜ್ಯದಲ್ಲಿ ಗೌತಮ ಬುದ್ಧನ ಸುಂದರವಾದ ಪ್ರತಿಮೆ ಇದೆ. ಈ ಪ್ರತಿಮೆಯು ತಥಾಗತ ತ್ಸಾಲ್ ಎಂದು ಕರೆಯಲ್ಪಡುವ ರಾವಂಗಲ್‌ನಲ್ಲಿರುವ ಬುದ್ಧ ಪಾರ್ಕ್‌ನಲ್ಲಿದೆ. ಇದರ ಎತ್ತರ 128 ಅಡಿ.

    MORE
    GALLERIES

  • 1010

    Tallest Statues: ಭಾರತದ ಟಾಪ್ 10 ಗಗನಚುಂಬಿ ಪ್ರತಿಮೆಗಳ ಬಗ್ಗೆ ನಿಮಗೆಷ್ಟು ಗೊತ್ತು! ಇಲ್ಲಿದೆ ಮಾಹಿತಿ

    ಇದೇ ವರ್ಷ ಅಂಬೇಡ್ಕರ್​ ಜಯಂತಿಯಂದು ಹೈದರಾಬಾದ್​ನಲ್ಲಿ ಭಾರತೀಯ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. 125 ಅಡಿ ಎತ್ತರದ ಪ್ರತಿಮೆಯು ಅನೇಕ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

    MORE
    GALLERIES