Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರಿಗೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಇದೀಗ ಕಟ್ಟುಪಾಡುಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಫ್ಘಾನ್ ಮಹಿಳೆಯರು ತಮ್ಮ ಮುಖಗಳನ್ನು ಮುಚ್ಚಬೇಕು ಎಂದು ತಾಲಿಬಾನ್ ಸರ್ಕಾರ ಫರ್ಮಾನು ಹೊರಡಿಸಿದೆ.

First published:

  • 17

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ತಾಲಿಬಾನ್ ಗುಂಪಿನ ಸರ್ವೋಚ್ಚ ನಾಯಕರಿಂದ ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳನ್ನು ಜಾಗತಿಕ ಮಟ್ಟದಲ್ಲಿ ಖಂಡಿಸಲಾಗುತ್ತಿದೆ. ಆದರೆ ತಾಲಿಬಾನಿಗಳ ತಮ್ಮ ಕಟ್ಟರ್ ನಿಲುವುಗಳನ್ನು ಮುಂದುವರೆಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ಸಚಿವಾಲಯದ ವಕ್ತಾರರು ಕಾಬೂಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಂಪಿನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್ಜಾದಾ ಅವರ ಆದೇಶವನ್ನು ಓದಿದರು. ಮಹಿಳೆ ಹೊರಗಟೆ ಮುಖ ಮುಚ್ಚಿಕೊಳ್ಳದಿದ್ದರೆ ಆಕೆ ತಂದೆ, ಇಲ್ಲವೇ ಸಂಬಂಧ ಸರ್ಕಾರಿ ಕೆಲಸದಲ್ಲಿದ್ದರೆ, ನೌಕರಿ ಕಳೆದುಕೊಳ್ಳುತ್ತಾರೆ ಎಂದು ನಿಯಮ ರೂಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ನೀಲಿ ಬರ್ಕಾವನ್ನು ಧರಿಸುವುದೇ ಒಳಿತು, ಇದರಿಂದ ಮಹಿಳೆಯ ಮುಖ ಸಂಪೂರ್ಣವಾಗಿ ಮುಚ್ಚಲ್ಪಡುತ್ತದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಮಹಿಳೆಯರು ಧಾರ್ಮಿಕ ಕಾರಣಗಳಿಗಾಗಿ ಶಿರಸ್ತ್ರಾಣವನ್ನು ಧರಿಸುತ್ತಾರೆ, ಆದರೆ ಕಾಬೂಲ್ ನಂತಹ ನಗರ ಪ್ರದೇಶಗಳಲ್ಲಿ ಅನೇಕರು ತಮ್ಮ ಮುಖಗಳನ್ನು ಮುಚ್ಚುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ಮಾರ್ಚ್ನಲ್ಲಿ ಬಾಲಕಿಯ ಹೈಸ್ಕೂಲನ್ನು ಪುನಾರಂಭಿಸಿದ ಕೆಲವೇ ಘಂಟೆಗಳಲ್ಲಿ ಮುಚ್ಚಿಸಲಾಯಿತು. ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯರು ಕಣ್ಣೀರಿನೊಂದಿಗೆ ಮನೆಗಳತ್ತ ಹೆಜ್ಜೆ ಹಾಕಿದ ಮನಕಲಕುವ ದೃಶ್ಯ ಕಂಡು ಬಂತು.

    MORE
    GALLERIES

  • 67

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ತಾಲಿಬಾನ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಯುಎಸ್ ಸೇರಿದಂತೆ ಇತರ ರಾಷ್ಟ್ರಗಳು ಅಭಿವೃದ್ಧಿ ನೆರವನ್ನು ಕಡಿತಗೊಳಿಸಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸಿವೆ.

    MORE
    GALLERIES

  • 77

    Blue Burqa: ಮನೆಯ ಹೊರಗೆ ಮುಖ ಮುಚ್ಚಲೇಬೇಕು: ನೀಲಿ ಬುರ್ಕಾನೇ ಧರಿಸಿ ಎಂದಿದ್ದೇಕೆ ತಾಲಿಬಾನ್ ಸರ್ಕಾರ?

    ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ದೇಶವನ್ನು ಆರ್ಥಿಕ ವಿನಾಶದತ್ತ ಸಾಗಿದೆ. ತಾಲಿಬಾನ್ ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿದೆ. ಜೊತೆಗೆ ಪುರುಷ ಸಂಬಂಧಿಯಿಲ್ಲದೆ ಮಹಿಳೆಯರು ಮನೆಯಿಂದ ಹೊರಹೋಗುವುದನ್ನು ನಿಷೇಧಿಸಿದೆ. ಈಗ ಮಹಿಳೆಯರು ಮುಖ ಮುಚ್ಚಬೇಕು ಎಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.

    MORE
    GALLERIES