PHOTOS: ಇಂದು ರಕ್ತ ಚಂದ್ರಗ್ರಹಣ, ಏನಿದರ ವಿಶೇಷತೆ..?; ಭಾರತದಲ್ಲಿ ಗೋಚರವಾಗುತ್ತಾ..?
News18 इंडिया | January 21, 2019, 12:56 PM IST
1/ 17
ಇಂದು ರಾತ್ರಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.
2/ 17
ಸೂಪರ್ ಬ್ಲಡ್ ವೂಲ್ಫ್ ಮೂನ್ ಅಂದರೆ ರಕ್ತ ಚಂದ್ರಗ್ರಹಣ.
3/ 17
ಇಂದು ರಾತ್ರಿ 10.34 ರಿಂದ ಗ್ರಹಣ ಗೋಚರಿಸಲಿದೆ.
4/ 17
ಆಯಾ ಪ್ರದೇಶಕ್ಕನುಸಾರ ಗ್ರಹಣದ ಸಮಯ ಬದಲಾಗಲಿದೆ.
5/ 17
ಚಂದ್ರನ ಮೇಲೆ ಭೂಮಿಯ ಗಾಢ ನೆರಳು ಆವರಿಸಲಿದೆ.
6/ 17
ರಾತ್ರಿ 11.41 ಕ್ಕೆ ಸಂಪೂರ್ಣ ಚಂದ್ರಗ್ರಹಣವನ್ನು ಕಾಣಬಹುದಾಗಿದೆ.
7/ 17
ಚಂದ್ರ ಗ್ರಹಣದ ಸಮಯದಲ್ಲಿ ಚಂದ್ರ ಕಂಡು ಕೆಂಪು ಬಣ್ಣದಲ್ಲಿ ಗೋಚರವಾಗಲಿದ್ದಾನೆ.
8/ 17
2018ರಲ್ಲಿಯೂ ಇದೇ ಸಂದರ್ಭದಲ್ಲಿ ಭೂಮಿ ರಕ್ತ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿತ್ತು.
9/ 17
ಭಾರತದ ಕಾಲಮಾನದ ಪ್ರಕಾರ ಸೋಮವಾರ ಗ್ರಹಣ ನಡೆಯುತ್ತದೆ.
10/ 17
ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ಆಗಿನ್ನೂ ಭಾನುವಾರ ರಾತ್ರಿಯಾಗಿರುತ್ತದೆ.
11/ 17
ಉತ್ತರ ಹಾಗೂ ದಕ್ಷಿಣ ಅಮೆರಿಕ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್, ಐರ್ಲೆಂಡ್, ಗ್ರೇಟ್ ಬ್ರಿಟನ್, ನಾರ್ವೆ, ಸ್ವೀಡನ್, ಪೋರ್ಚುಗಲ್ ಹಾಗೂ ಫ್ರಾನ್ಸ್ ಮತ್ತು ಸ್ಪೇನ್ನ ಕರಾವಳಿ ಭಾಗಗಳಲ್ಲಿ ರಕ್ತಚಂದ್ರಗ್ರಹಣ ಗೋಚರವಾಗಲಿದೆ.
12/ 17
ಏಷಿಯಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ಗಳಲ್ಲಿ ಗ್ರಹಣ ಗೋಚರಿಸುವುದಿಲ್ಲ. ಇದರಿಂದ ಭಾರತದಲ್ಲೂ ಗ್ರಹಣ ಕಾಣುವುದಿಲ್ಲ.
13/ 17
ಚಂದ್ರ ಭೂಮಿಯಿಂಧ 3,56,565 ಕಿ.ಮೀ.ದೂರದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದೇ ಅವಧಿಯಲ್ಲಿ ಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ.
14/ 17
ಸೂರ್ಯನ ಬೆಳಕಿಗೆ ಭೂಮಿ ಅಡ್ಡಬರುವುದರಿಂದ ಚಂದ್ರನ ಅಂಗಳ ಕಪ್ಪಾಗಿ ಕಾಣುತ್ತದೆ
15/ 17
ಈ ಬಾರಿ ಅದು ಕಿತ್ತಳೆ ಬಣ್ಣ ಅಥವಾ ಅದಕ್ಕಿಂತ ಗಾಢವಾಗಿ ಅಂದರೆ ರಕ್ತವರ್ಣದಲ್ಲಿ ಕಾಣಿಸಿಕೊಳ್ಳುತ್ತದೆ.
16/ 17
ಅಮಾವಾಸ್ಯೆ ಸೂರ್ಯ ಗ್ರಹಣ ಕಳೆದು ಹುಣ್ಣಿಮೆಗೆ ಈಗ ಚಂದ್ರ ಗ್ರಹಣ ಬಂದಿದೆ.
17/ 17
ಭಾರತದಲ್ಲಿ ಎಲ್ಲೂ ಕೂಡ ಸೂಪರ್ ಬ್ಲಡ್ ಮೂನ್ ಗೋಚರವಾಗುವುದಿಲ್ಲ.