ಗ್ಲೋಬಲ್ ಯುನಿಸೆಫ್ ಗುಡ್ವಿಲ್ ರಾಯಭಾರಿಯಾಗಿರುವ ಪ್ರಿಯಾಂಕ ಚೋಪ್ರಾ, ವಿನಾಶಕಾರಿ ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದ ಜನರಿಗೆ ನೋವು ಮತ್ತು ಸಂಕಟ ಮುಂದುವರಿದಿದೆ. ಶೋಧಾ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದೆ . ಈ ವೇಳೆ 3 ತಿಂಗಳ ಮಗುವನ್ನು ಅವಶೇಷಗಳಿಂದ ರಕ್ಷಿಸಲಾಗಿದೆ. ಇನ್ನೂ ಅನೇಕರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಒಂದಾಗಿ ನೆರವಾಗೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.