ಜನಪ್ರಿಯ ಸುಡೋಕು ಬಗ್ಗೆ ಕೇಳಿರುತ್ತೀರಾ. ಮಕ್ಕಳಿಂದ ಹಿಡಿದು ಅನೇಕರು ಸುಡೋಕು ಬಿಡಿಸುತ್ತಾರೆ. ಆದರೆ ‘ಸುಡೋಕು ಜನಪ್ರಿಯ’ ಎಂದೇ ಕರೆಯಲ್ಪಡುವ ಮಕಿ ಕಾಜಿ ಅವರು ನಿಧನರಾಗಿದ್ದಾರೆ. 69 ವರ್ಷದ ಮಕಿ ಕಾಜಿ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
2/ 6
ಮಕಿ ಕಾಜಿ ಕಾನ್ಸರ್ ರೋಗದಿಂದಾಗಿ ಅಸೌಖ್ಯ ಹೊಂದಿದ್ದರು. ಆಗಸ್ಟ್ 10ರಂದು ತಮ್ಮ ಸ್ವಗೃಹದಲ್ಲೇ ಸಾವನ್ನಪ್ಪಿದ್ದಾರೆ. ಮಕಿ ಕಾಜಿ ‘ಸುಡೋಕು ತಂದೆ’ ಎಂದೇ ಖ್ಯಾತರಾಗಿದ್ದರು.
3/ 6
ವಿಶ್ವದಾದ್ಯಂತ ಬಹುತೇಕ ಜನರು ಸುಡೋಕು ಬಳಸುತ್ತಿದ್ದಾರೆ. ಆದರೀಗ ಸುಡೋಕು ಆಟವನ್ನು ಜನಪ್ರಿಯಗೊಳಿಸಿದ ಮಕಿ ಕಾಜಿ ನಿಧನ ಸುಡೋಕು ಪ್ರಿಯರಿಗೆ ಬೇಸರ ತರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮಕಿ ಕಾಜಿ ಸಾವಿನ ಬಗ್ಗೆ ಬರೆಯುವ ಮೂಲಕ ಬೇಸರ ಹೊರಹಾಕಿದ್ದಾರೆ.
4/ 6
ಸುಡೋಕು ಒಂದು ರೀತಿಯ ಸಂಖ್ಯಾತ್ಮಕ ಆಟವಾಗಿದೆ. ಸ್ವಿಸ್ ಗಣಿತಜ್ಞ ಲಿಯೊನ್ಹಾರ್ಡ್ ಯೂಲರ್ 18ನೇ ಶತಮಾನದಲ್ಲಿ ಇದನ್ನು ಕಂಡುಹಿಡಿದನು. ಮಕಿ ಕಾಜಿಯು ಸುಡೋಕುವನ್ನು ಜನಪ್ರಿಯಗೊಳಿಸಿದರು.
5/ 6
1980ರ ದಶಕದಲ್ಲಿ ಅಮೆರಿಕದ ನಿಯತಕಾಲಿಯೊಂದು ಈ ಆಟದ ಬಗ್ಗೆ ಪ್ರಕಟಿಸಿತ್ತು. ನಂತರ ಅದನ್ನು ಜಪಾನಿಗರು ಬಳಸಲು ಮುಂದಾರು. ನಂತರ ಜಪಾನಿನಲ್ಲಿ ಸುಡೋಕು ಜನಪ್ರಿಯಗೊಳ್ಳಲು ಕಾರಣವಾಯಿತು.
6/ 6
ಯುನೈಟೆಡ್ ಸ್ಟೇಟ್ ಆಧುನಿಕ ಸುಡೋಕು ವರ್ಷನ್ ಅನ್ನು ಪರಿಚಯಿಸಿತು ಎಂದು ಹೇಳಲಾಗುತ್ತಿದೆ. ಆದರೆ ಕಾಜಿ ಇದನ್ನು ಜನಪ್ರಿಯಗೊಳಿಸಿದರು ಎಂದು ಖ್ಯಾತಿ ಪಡೆದಿದ್ದಾರೆ.