PHOTOS: ಪಾತ್ರೆಯನ್ನೇ ದೋಣಿಯಾಗಿಸಿಕೊಂಡು ಶಾಲೆಗೆ ಹೋಗುವ ಮಕ್ಕಳ ವ್ಯಥೆ
ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಸೂಟಾ ಗ್ರಾಮದ ಮಕ್ಕಳು ಶಾಲೆಗೆ ತೆರಳಲು ಅಡುಗೆ ಪಾತ್ರೆಗಳನ್ನೇ ದೋಣಿಯಾಗಿಸಿಕೊಂಡು ಹೋಗುತ್ತಾರೆ. ಪಶ್ಚಿಮ ಕುರುವಾ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಲು ಯಾವುದೇ ರಸ್ತೆ ಮಾರ್ಗಗಳಿಲ್ಲ. ಸೇತುವೆ ಸಂಪರ್ಕವೂ ಇಲ್ಲ. ಹೀಗಾಗಿ ಮಕ್ಕಳು ತಮ್ಮ ಜೀವದ ಹಂಗು ತೊರೆದು ಅಡುಗೆ ಪಾತ್ರೆಗಳನ್ನು ದೋಣಿಯಾಗಿಸಿಕೊಂಡು, ಕೈಯಲ್ಲೇ ಹುಟ್ಟು ಹಾಕುತ್ತಾ ನದಿ ದಾಟುತ್ತಾರೆ. ಈ ಬಗ್ಗೆ ಸ್ಥಳೀಯರು ಸರ್ಕಾರಕ್ಕೆ ಎಷ್ಟೇ ಬಾರಿ ಮನವಿ ಮಾಡಿದ್ದರೂ, ಸೇತುವೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿಲ್ಲ.