ಮಾರುಕಟ್ಟೆಯಲ್ಲಿ ನಾವು ಬಗೆ ಬಗೆಯ ಕುಲ್ಫಿಗಳಿನ್ನ ನೋಡಿರುತ್ತೇವೆ. ಸಾದಾ ಕುಲ್ಫಿ, ಪಿಸ್ತಾ ಕುಲ್ಫಿಯಿಂದ ಹಿಡಿದು ಮಾವಿನಕಾಯಿ, ಬಾದಾಮ್ ಕುಲ್ಫಿಯವರೆಗೂ ಹಲವು ಕುಲ್ಫಿಗಳಿವೆ. ಇವುಗಳ ಉಲ್ಲೇಖವೇ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಆದರೆ ನೀವು ಎಂದಾದರೂ ಚಿನ್ನದ ಕುಲ್ಫಿ ಬಗ್ಗೆ ಕೇಳಿದ್ದೀರಾ? ಇಂದೋರ್‌ನಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಿನ್ನದ ಕುಲ್ಫಿ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ಸಾಕಷ್ಟು ಚರ್ಚೆಯಾಗುತ್ತಿದೆ.
ಚಿನ್ನದ ಕುಲ್ಫಿ ಪೋಸ್ಟ್ ಏಪ್ರಿಲ್ 14 ರಂದು Instagram ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದನ್ನು ಸುಮಾರು 8 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇಂಟರ್ನೆಟ್ ಬಳಕೆದಾರರು ಈ ಕುಲ್ಫಿ ತಿನ್ನುವುದರಿಂದ ಹಣ ವ್ಯರ್ಥ ಆಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ನಾನು ಆ ಶಾಪ್ಗೆ ಹೋಗಿದ್ದೆ, ಆದರೆ ಅದು 351 ರೂಪಾಯಿಗೆ ಯೋಗ್ಯವಾಗಿಲ್ಲ. ಮತ್ತೊಬ್ಬ ಸಹೋದರ ಇದು ನಕಲಿ ಚಿನ್ನ, ಇದು ಅರ್ಧ ಕ್ಯಾರೆಟ್ ಕೂಡ ಅಲ್ಲ, ಇನ್ನೂ 24 ಕ್ಯಾರೆಟ್ ದೂರದ ಮಾತು ಎಂದು ಹೇಳಿದ್ದಾರೆ.