Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

ಜೈಪುರ: ಆಗ ತಾನೆ ಹುಟ್ಟಿ ಇನ್ನೂ ಒಂದು ತಿಂಗಳು ಭರ್ತಿಯಾಗದ ಮಗುವೊಂದನ್ನು ಬೀದಿನಾಯಿಯೊಂದು ಎಳೆದೊಯ್ದು ಕಚ್ಚಿ ಕೊಂದು ಹಾಕಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ತನ್ನ ಹಸುಗೂಸನ್ನು ಕಳೆದುಕೊಂಡು ಅನಾಥವಾಗಿರುವ ತಾಯಿಯ ಕರುಳ ಸಂಕಟದ ನೋವು ಮುಗಿಲು ಮುಟ್ಟಿದೆ.

First published:

  • 17

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮಂಗಳವಾರ ಈ ಆಘಾತಕಾರಿ ಘಟನೆ ನಡೆದಿದ್ದು, ಆಸ್ಪತ್ರೆಯ ವಾರ್ಡ್‌ನ ಹೊರಗೆ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 27

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ಸೋಮವಾರ ತಡರಾತ್ರಿ 2 ಬೀದಿ ನಾಯಿಗಳು ಆಸ್ಪತ್ರೆಯ ಟಿಬಿ ವಾರ್ಡ್‌ನ ಒಳಗೆ ನುಗ್ಗಿದ್ದವು. ಆ ಪೈಕಿ ಒಂದು ನಾಯಿ ನವಜಾತ ಶಿಶುವನ್ನು ಕಚ್ಚಿಕೊಂಡು ಹೊರಗೆ ಬರುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

    MORE
    GALLERIES

  • 37

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ಮಗುವಿನ ತಂದೆ ಟಿಬಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು, ತಡರಾತ್ರಿ ಆಗಿದ್ದರಿಂದ ಮಗುವಿನ ತಾಯಿ ನಿದ್ರೆಗೆ ಜಾರಿದ್ದರು. ಈ ವೇಳೆ ನಾಯಿ ಈ ಕೃತ್ಯ ಎಸಗಿದೆ ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 47

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ಈ ದುರ್ಘಟನೆ ನಡೆದ ಸಮಯದಲ್ಲಿ ಟಿಬಿ ವಾರ್ಡ್‌ನಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ, ಆಸ್ಪತ್ರೆಯಲ್ಲಿ ಎಷ್ಟೊಂದು ಬೇಜವಾಬ್ದಾರಿ ಇದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಅನ್ನೋದರಲ್ಲಿ ಎರಡು ಮಾತಿಲ್ಲ.

    MORE
    GALLERIES

  • 57

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ಸದ್ಯ ವೈದ್ಯಕೀಯ ಮಂಡಳಿಯಿಂದ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಮೇಲಾಧಿಕಾರಿ ತಿಳಿಸಿದ್ದಾರೆ.

    MORE
    GALLERIES

  • 67

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ಮಗು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರು ಆಸ್ಪತ್ರೆಯ ಆಡಳಿತದ ಬೇಜವಾಬ್ದಾರಿ ವಿರುದ್ಧ ಕಿಡಿಕಾರಿದ್ದಾರೆ.

    MORE
    GALLERIES

  • 77

    Dog Attack: ಆಸ್ಪತ್ರೆ ವಾರ್ಡ್‌ನಲ್ಲಿ ಮಲಗಿದ್ದ ಹಸುಗೂಸನ್ನು ಎಳೆದುಕೊಂಡು ಹೋಗಿ ಕೊಂದ ಬೀದಿ ನಾಯಿಗಳು!

    ಘಟನೆ ವೇಳೆ ರೋಗಿಯ ಅಟೆಂಡರ್ ನಿದ್ರಿಸುತ್ತಿದ್ದರು, ನಾನು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿಲ್ಲ. ತನಿಖೆಯ ನಂತರ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಸಿರೋಹಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    MORE
    GALLERIES