ಈ ಬಂಗಲೆಯನ್ನು ನಿರ್ಮಿಸಿದ ಇಂಗ್ಲೀಷ್ನವನು ಚಹಾ ತೋಟದ ವ್ಯವಸ್ಥಾಪಕನಾಗಿದ್ದ. ಆತ ತಮ್ಮ ಕುಟುಂಬದೊಂದಿಗೆ ಈ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಒಂದು ದಿನ ಅವರ ಮಗು ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿತ್ತು. ಆ ಬಳಿಕ ಪತ್ನಿಯೊಂದಿಗೆ ಆತ ಲಂಡನ್‌ಗೆ ತೆರಳಿದ್ದರು. ಅಲ್ಲಿಂದ ಈ ಬಂಗಲೆಯಲ್ಲಿ ಬೇತಾಳ ಕಥೆಗಳು ಹುಟ್ಟಿಕೊಂಡಿವೆ. (Photo: Twitter/itz_ravanan)
ಒಂದು ಕಥೆಯ ಪ್ರಕಾರ, ಆ ಬಂಗಲೆಗೆ ಸೌದೆ ಸಂಗ್ರಹಿಸಲು ಹೋದ ಸ್ಥಳೀಯ ಯುವತಿಯೊಬ್ಬಳು, ಅಲ್ಲಿಂದ ಹಿಂದಿರುಗಿದ ನಂತರ ವಿಚಿತ್ರವಾಗಿ ವರ್ತಿಸತೊಡಗಿದಳು. ಈ ಅವಿದ್ಯಾವಂತ ಹುಡುಗಿ ಇಂಗ್ಲೀಷ್ನಲ್ಲಿ ಸರಾಗವಾಗಿ ಮಾತನಾಡಿದ್ದಲ್ಲದೆ, ಇಂಗ್ಲೀಷ್ನಲ್ಲಿ ಓದುವುದು ಬರೆಯುವುದು ಶುರು ಮಾಡಿದ್ದಾಳೆ. ಹಾಗಾಗಿ ಬಾಲಕಿಗೆ ಸತ್ತ ಬಾಲಕಿಯ ದೆವ್ವ ಹಿಡಿದಿದೆ ಎಂದು ಹಲವರು ನಂಬಿದ್ದಾರೆ. (Photo:Twitter/Anandans76)
ಈ ಬಂಗಲೆಯ ಬಾಗಿಲು ಮತ್ತು ಕಿಟಕಿಗಳನ್ನು ಮುರಿದಿದ್ದು, ಕೆಲವು ಮರದ ಹಲಗೆಗಳಿಂದ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ತೋರುತ್ತದೆ. ಹಗಲಿನಲ್ಲಿ ಮನೆಯಲ್ಲಿ ಯಾವುದೇ ಶಬ್ಧ ಇರುವುದಿಲ್ಲ, ಆದರೆ ಪ್ರತಿ ರಾತ್ರಿ ಇಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಸ್ಥಳೀಯರು. ಈ ಕಥೆಯು ಭಯಾನಕ ಚಲನಚಿತ್ರವನ್ನು ನಿರ್ಮಿಸುವಷ್ಟು ವಿಷಯವನ್ನು ಹೊಂದಿದೆ ಎನ್ನುತ್ತಾರೆ ಸ್ಥಳೀಯರು.