ಜನರ ಮೇಲೆ ಆಕ್ರಮಣ ಹೆಚ್ಚಾಗುತ್ತದೆ: ಹೌಸಿಂಗ್ ಸೊಸೈಟಿ ಅಥವಾ ಕಟ್ಟಡಗಳ ಕಂಪೌಂಡ್‌ಗಳಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕುವುದು ಹಾಗೂ ಅವುಗಳ ಲಾಲನೆ ಪಾಲನೆಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ಪಶುವೈದ್ಯರಾದ ಜಯರಾಮ್ ದೇಸಾಯಿ ತಿಳಿಸಿದ್ದಾರೆ. ಬೀದಿನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳು ಆ ಸ್ಥಳಕ್ಕೆ ಭೇಟಿನೀಡುವ ಕಸಕಡ್ಡಿ ಆಯುವವರು, ನ್ಯೂಸ್‌ಪೇಪರ್ ಹಾಕುವವರು, ಹಾಲು ಹಾಕುವವರು ಇತಹವರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಮನುಷ್ಯರ ಸಮಸ್ಯೆ, ಪ್ರಾಣಿಗಳ ತಪ್ಪಿಲ್ಲ: ದಕ್ಷಿಣ ಗೋವಾದಲ್ಲಿ ಪ್ರಾಣಿ ದಯಾ ಸಂಘ ನಡೆಸುವ ಗ್ರೇಸ್ ಕೌರ್ ತಿಳಿಸಿರುವಂತೆ ಈ ವಿಷಯದಲ್ಲಿ ಪ್ರಾಣಿಗಳದ್ದು ಯಾವುದೇ ದೋಷವಿಲ್ಲ. ಇದೆಲ್ಲಾ ಮಾನವ ನಿರ್ಮಿತ ಸಮಸ್ಯೆಯಾಗಿದ್ದು ಮಾನವರೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಜನರು ನಾಯಿ ಮರಿಗಳನ್ನು ಮಾರುಕಟ್ಟೆ, ಕಟ್ಟಡಗಳ ಸಮೀಪ, ರೆಸಿಡೆನ್ಸಿ ಪಕ್ಕ ಬಿಟ್ಟು ಹೋಗುತ್ತಾರೆ. ಈ ಸಮಯದಲ್ಲಿ ಯಾವುದೇ ಚುಚ್ಚುಮದ್ದು ಹಾಗೂ ಲಸಿಕೆಗಳನ್ನು ನೀಡದೆಯೇ ತಮಗೆ ಬೇಕಾದ ಸ್ಥಳದಲ್ಲಿ ನಾಯಿ ಮರಿಗಳನ್ನು ಬಿಡುತ್ತಾರೆ.