Pregnancy | ಮಕ್ಕಳು ಮಾಡಿಕೊಳ್ಳುವ ಪ್ಲಾನ್ ಇದ್ರೆ 1 ವರ್ಷ ಮುಂದಕ್ಕೆ ಹಾಕಿ; ಯಾಕಂದ್ರೆ ಇದು ಸರ್ಕಾರ ಹೊರಡಿಸಿರುವ ಆದೇಶ
Covid-19 Risks: ಮೊದಲೇ ಹೇಳಿದಂತೆ ಕೋವಿಡ್-19ನಿಂದ ಪುಟಾಣಿ ಮಕ್ಕಳು ಸಾವನ್ನಪ್ಪುತ್ತಿರುವು ಒಂದೆಡೆಯಾದರೆ ಗರ್ಭಿಣಿಯರನ್ನು ಕೂಡ ಕೊರೋನಾ ಬಿಟ್ಟಿಲ್ಲ. ಶ್ರೀಲಂಕಾದಲ್ಲಂತೂ ನಾಲ್ಕು ತಿಂಗಳಲ್ಲಿ 40ಕ್ಕೂ ಹೆಚ್ಚು ತಾಯಂದಿರು ಕೋವಿಡ್ 19ಗೆ ಸಾವನ್ನಪ್ಪಿದ್ದಾರೆ.
ಕೊರೋನಾ ವಿಶ್ವದಾದ್ಯಂತ ಜನರನ್ನು ಸಂಕಷ್ಟಕ್ಕೆ ದೂಡಿದ ಮಹಾಮಾರಿ. ಈ ಮಾರಕ ಕಾಯಿಲೆಯಿಂದ ಅನೇಕರು ಸಾವನ್ನಪ್ಪಿದ್ದಾರೆ. ಹಿರಿಯರು, ಮಕ್ಕಳೆಂದು ನೋಡದೆ ಅವರನ್ನು ಸಾವಿನ ಕೂಪಕ್ಕೆ ಕೊಂಡೊಯ್ದಿದೆ. ಬಡಜನರನ್ನು ಸಂಕಷ್ಟಕ್ಕೀಡು ಮಾಡಿದೆ ಈ ಕೊರೋನಾ.
2/ 8
ಮೊದಲೇ ಹೇಳಿದಂತೆ ಕೋವಿಡ್-19ನಿಂದ ಪುಟಾಣಿ ಮಕ್ಕಳು ಸಾವನ್ನಪ್ಪುತ್ತಿರುವು ಒಂದೆಡೆಯಾದರೆ ಗರ್ಭಿಣಿಯರನ್ನು ಕೂಡ ಕೊರೋನಾ ಬಿಟ್ಟಿಲ್ಲ. ಶ್ರೀಲಂಕಾದಲ್ಲಂತೂ ನಾಲ್ಕು ತಿಂಗಳಲ್ಲಿ 40ಕ್ಕೂ ಹೆಚ್ಚು ತಾಯಂದಿರು ಕೋವಿಡ್ 19ಗೆ ಸಾವನ್ನಪ್ಪಿದ್ದಾರೆ.
3/ 8
ಈ ವಿಚಾರವನ್ನು ಕಂಡುಕೊಂಡ ಅಲ್ಲಿನ ಆರೋಗ್ಯ ಸಚಿವಾಲಯ ಗುರುವಾರದಂದು ನಿರ್ಧಾರವೊಂದಕ್ಕೆ ಬಂದಿದೆ. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ತಾಯಿಯಾಗಲು ಅಥವಾ ಗರ್ಭಿಣಿಯಾಗುದನ್ನು ವಿಳಂಬ ಮಾಡುವಂತೆ ಒತ್ತಾಯಿಸಿದೆ.
4/ 8
ಮೇ ತಿಂಗಳಿನಲ್ಲಿ ಕೊರೋನಾದಿಂದಾಗಿ ಅನೇಕ ತಾಯಂದಿರು ಸಾವನ್ನಪ್ಪಿದ್ದಾರೆ. ಏಪ್ರಿಲ್ ಮಧ್ಯದಲ್ಲಿ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಡೆಲ್ಟಾ ಸೋಂಕಿನ ವಿರುದ್ಧ ಹೋರಾಡುತ್ತಾ ಬಂದಿದೆ.
5/ 8
ಆರೋಗ್ಯ ಪ್ರಚಾರ ಬ್ಯೂರೋದ ನಿರ್ದೇಶಕಿ ಚಿತ್ರಮಾಲಿ ಡಿ ಸಿಲ್ವಾ ಈ ಬಗ್ಗೆ ಮಾತನಾಡಿ, ಸಾಮಾನ್ಯವಾಗಿ, ವರ್ಷಕ್ಕೆ 90 ರಿಂದ 100 ತಾಯಂದಿರು ಸಾವನಪ್ಪುತ್ತಿದ್ದಾರೆ, ಆದರೆ ಮೂರನೇ ತರಂಗ ಆರಂಭವಾದಾಗಿನಿಂದ ನಾವು ಕೋವಿಡ್ನಿಂದ 41 ಗರ್ಭಿಣಿಯರ ಸಾವುಗಳನ್ನು ಕಂಡಿದ್ದೇವೆ "ಎಂದು ಹೇಳಿದ್ದಾರೆ.
6/ 8
ಸರ್ಕಾರಿ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಹರ್ಷ ಅಟಪಟ್ಟು ಅವರು "ನವವಿವಾಹಿತರು ಹಾಗೂ ಮಗುವನ್ನು ಪಡೆಯಲು ಪ್ರಯತ್ನಿಸುತ್ತಿರುವವರು ಕೋವಿಡ್ -19 ರ ಅಪಾಯದಿಂದಾಗಿ ಕನಿಷ್ಠ ಒಂದು ವರ್ಷ ವಿಳಂಬ ಮಾಡಲು ಪ್ರಯತ್ನಿಸಿ" ಎಂದು ಹೇಳಿದ್ದಾರೆ.
7/ 8
ಸುಮಾರು 5,500 ತಾಯಂದಿರು ಸೋಂಕಿಗೆ ಒಳಗಾಗಿದ್ದಾರೆ. 70 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಎಂದು ಡಿ ಸಿಲ್ವಾ ಹೇಳಿದರು.
8/ 8
ಶ್ರೀಲಂಕಾದಲ್ಲಿ ಮೂರನೇ ತರಂಗ ಆರಂಭವಾದಾಗಿನಿಂದ ಕೋವಿಡ್ಗೆ 41 ಗರ್ಭಿಣಿಯರು ಸಾವುನ್ನಪ್ಪುತ್ತಿದ್ದಾರೆ. ಹೀಗಾಗಿ ಎತ್ತರಿಕೆ ನಿರ್ಧಾರ ಜೊತೆಗೆ ಜಾಗರೂಕತೆ ವಹಿಸುವ ಆದೇಶ ಹೊರಡಿಸಿದೆ.