Sri Lanka Bomb Blast: ಅಸುನೀಗಿದ ಅಮಾಯಕ ಜೀವಗಳ ಅಂತ್ಯಸಂಸ್ಕಾರದ ಮನಕಲಕುವ ದೃಶ್ಯಗಳು
ಕ್ರಿಶ್ಚಿಯನ್ನರ ಈಸ್ಟರ್ನ್ ದಿನದಂದು ಭಾನುವಾರ ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 320 ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಸುಮಾರು 500 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಉಗ್ರರ ಈ ಹೇಯ ಕೃತ್ಯಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿದ್ದವು. ಅಂತ್ಯಸಂಸ್ಕಾರದ ವೇಳೆ ಕುಟುಂಬಸ್ಥರ ಆಕ್ರಂದನ ಎಂತಹವರ ಕಣ್ಣಂಚಲ್ಲೂ ನೀರು ತರಿಸುತ್ತದೆ. ಆ ಘಟನೆಯ ಮನಕಲಕುವ ಕೆಲವು ದೃಶ್ಯಗಳು ಇಲ್ಲಿವೆ.