Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

ಚೆನ್ನೈ: ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತೆಯರು ಸೇರಿದಂತೆ ಸ್ತ್ರೀಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ತಮಿಳುನಾಡಿನಲ್ಲಿ ಕೂಡ ಇಂತಹದೇ ಪ್ರಕರಣವೊಂದು ವರದಿಯಾಗಿದೆ.

First published:

  • 17

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ಮೆಡಿಕಲ್‌ ಕೋರ್ಸ್‌ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೋಮವಾರ ಚರ್ಚ್ ಪಾದ್ರಿಯೊಬ್ಬರನ್ನು ಪೊಲೀಸರು ಕನ್ಯಾಕುಮಾರಿಯಲ್ಲಿ ಬಂಧಿಸಿದ್ದಾರೆ.

    MORE
    GALLERIES

  • 27

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಪಾದ್ರಿ ಬೆನೆಡಿಕ್ಟ್ ಆಂಟೊ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    MORE
    GALLERIES

  • 37

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ಆರೋಪಿ ಪಾದ್ರಿ ಕಳೆದೆರಡು ದಿನಗಳಿಂದ ತಲೆಮರೆಸಿಕೊಂಡಿದ್ದ, ಆತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಇಂದು ಬೆಳಗ್ಗೆ ನಾಗರ್‌ಕೋಯಿಲ್‌ನ ಫಾರ್ಮ್‌ಹೌಸ್‌ನಲ್ಲಿ ಬಂಧನ ಮಾಡಿದ್ದಾರೆ.

    MORE
    GALLERIES

  • 47

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ಇತ್ತೀಚೆಗೆ ಆರೋಪಿ ಪಾದ್ರಿಯ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಪಾದ್ರಿಯ ಲ್ಯಾಪ್‌ಟಾಪ್ ಕಿತ್ತುಕೊಂಡಿತ್ತು. ಅದರಲ್ಲಿ ಆತನ ಖಾಸಗಿ ಸಮಯದ ವಿಡಿಯೋಗಳು ಇತ್ತು ಎನ್ನಲಾಗಿದೆ. ಆದಾಗ್ಯೂ, ಪಾದ್ರಿ ಯಾರ ವಿರುದ್ಧವೂ ದೂರು ನೀಡಿರಲಿಲ್ಲ.

    MORE
    GALLERIES

  • 57

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ಈ ನಡುವೆ ಪಾದ್ರಿಯು ಮಹಿಳೆಯೊಂದಿಗೆ ನಡೆಸಿದ ಸರಸ- ಸಲ್ಲಾಪದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬಗ್ಗೆಯೂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

    MORE
    GALLERIES

  • 67

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ಲ್ಯಾಪ್‌ಟಾಪ್ ವಶಪಡಿಸಿಕೊಂಡ ಒಂದೆರಡು ದಿನಗಳ ನಂತರ, ಪಾದ್ರಿ ಆಂಟೊ ಯುವತಿಯರೊಂದಿಗೆ ಇರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

    MORE
    GALLERIES

  • 77

    Crime News: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಚರ್ಚ್‌ ಪಾದ್ರಿಯನ್ನು ಬಂಧಿಸಿದ ಪೊಲೀಸರು

    ಅಂದ ಹಾಗೆ ಪಾದ್ರಿ ಈ ಹಿಂದೆ ಆಸ್ಟಿನ್ ಗಿನೋ ಎಂಬ ಯುವಕನ ವಿರುದ್ಧ ಯಾವುದೋ ಪ್ರಕರಣದಲ್ಲಿ ಸುಳ್ಳು ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದ, ಇದರ ದ್ವೇಷದಿಂದಲೇ ಪಾದ್ರಿಯ ಅಕ್ರಮಗಳನ್ನು ಬಯಲೆಳೆಯುವ ಉದ್ದೇಶದಿಂದ ಈ ತರ ಯೋಜನೆ ರೂಪಿಸಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    MORE
    GALLERIES