ಭಾರತೀಯ ರೈಲ್ವೆ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ದೇಶಾದ್ಯಂತ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಗುತ್ತಿದೆ. ಕೆಲವು ಮಾರ್ಗಗಳಲ್ಲಿ ಟಿಕೆಟ್ ಸಿಗುವುದೂ ಕಷ್ಟವಾಗುತ್ತಿದೆ. ಆದರೆ ಭಾರತೀಯ ರೈಲ್ವೇ ಪ್ರಾಯೋಗಿಕವಾಗಿ ಮಿನಿ ವಂದೇ ಭಾರತ್ ರೈಲುಗಳನ್ನು ಬಿಡುಗಡೆ ಮಾಡಿದೆ. ಈ ಮಿನಿ ವಂದೇ ಭಾರತ್ ರೈಲುಗಳು ಕಡಿಮೆ ಪ್ರಯಾಣಿಕರಿರುವ ಮಾರ್ಗಗಳಲ್ಲಿ ಚಲಿಸುತ್ತವೆ. (ಸಾಂಕೇತಿಕ ಚಿತ್ರ)
ಭಾರತೀಯ ರೈಲ್ವೇ ಪ್ರಸ್ತುತ ಮಿನಿ ವಂದೇ ಭಾರತ್ ರೈಲನ್ನು ಸಿಕಂದರಾಬಾದ್-ತಿರುಪತಿ ಮತ್ತು ಚೆನ್ನೈ-ಕೊಯಮತ್ತೂರು ಮಾರ್ಗಗಳಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ 14 ವಂದೇ ಭಾರತ್ ರೈಲುಗಳು ಸೇವೆ ಸಲ್ಲಿಸುತ್ತಿವೆ ಅದರಲ್ಲಿ 2 ಮಿನಿ ವಂದೇ ಭಾರತ್ ರೈಲುಗಳಾಗಿವೆ. ಅವುಗಳಲ್ಲಿ ಒಂದು ತೆಲುಗು ರಾಜ್ಯಗಳನ್ನು ಸಂಪರ್ಕಿಸುವ ಸಿಕಂದರಾಬಾದ್ ಮತ್ತು ತಿರುಪತಿ ನಡುವೆ ಓಡಾಡುತ್ತಿದೆ. (ಸಾಂಕೇತಿಕ ಚಿತ್ರ)
ಸಿಕಂದರಾಬಾದ್-ತಿರುಪತಿ ಮಾರ್ಗದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ರೈಲಿಗೆ ತೆಲುಗು ರಾಜ್ಯಗಳ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ರೈಲಿನಲ್ಲಿ ಕೇವಲ 8 ಬೋಗಿಗಳಿರುವುದರಿಂದ ಪ್ರಯಾಣಿಕರಿಗೆ ರಿಸರ್ವೇಸನ್ ಸಿಗುತ್ತಿಲ್ಲ. IRCTC ವೆಬ್‌ಸೈಟ್ ಅನ್ನು ಚೆಕ್ ಮಾಡಿದರೆ, ವೇಯ್ಟಿಂಗ್ ಲಿಸ್ಟ್ ಇನ್ನೂ 10 ದಿನಗಳವರೆಗೆ ಗೋಚರಿಸುತ್ತಿದೆ. (ಸಾಂಕೇತಿಕ ಚಿತ್ರ)
ಈ ಕಾರಣದಿಂದ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ರೈಲಿನಲ್ಲಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಕಿಶನ್ ರೆಡ್ಡಿ ಮುಂದಾಗಿದ್ದಾರೆ. ಕೋಚ್‌ಗಳ ಸಂಖ್ಯೆಯನ್ನು ಏಕೆ ಕಡಿಮೆ ಮಾಡಲಾಗಿದೆ ಎಂದು ಅವರು ರೈಲ್ವೇ ಅಧಿಕಾರಿಗಳನ್ನು ಕೇಳಿದ್ದಾರೆ. ಜೊತೆಗೆ 16 ಬೋಗಿಗಳೊಂದಿಗೆ ಈ ವಂದೇ ಭಾರತ್ ರೈಲನ್ನು ಬಿಡುವಂತೆ ದಕ್ಷಿಣ ಮಧ್ಯ ರೈಲ್ವೇ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. (ಸಾಂಕೇತಿಕ ಚಿತ್ರ)
ಸಿಕಂದರಾಬಾದ್‌ನಿಂದ ತಿರುಪತಿಗೆ ಎ.ಸಿ. ಚೇರ್ ಕ್ಲಾಸ್ ಟಿಕೆಟ್ ಬೆಲೆ ರೂ.1680 ಮತ್ತು ಎಕ್ಸಿಕ್ಯೂಟಿವ್ ಚೇರ್ ಕ್ಲಾಸ್ ಟಿಕೆಟ್ ಬೆಲೆ ರೂ.3080 ಇದೆ. ತಿರುಪತಿಯಿಂದ ಸಿಕಂದರಾಬಾದ್‌ಗೆ ಎಸಿ ಚೆರ್ ಕೋಚ್ ಟಿಕೆಟ್ ದರ ರೂ.1625 ಆಗಿದ್ದರೆ ಎಕ್ಸಿಕ್ಯೂಟಿವ್ ಚೇರ್ ಕ್ಲಾಸ್ ಟಿಕೆಟ್ ದರ ರೂ.3030. ಟಿಕೆಟ್ ದರದಲ್ಲಿ ಕ್ಯಾಟರಿಂಗ್ ಚಾರ್ಜ್ ಕೂಡ ಸೇರಿಸಲಾಗಿದೆ. (ಸಾಂಕೇತಿಕ ಚಿತ್ರ)