Trains Cancelled: ಪ್ರಯಾಣಿಕರೇ ಗಮನಿಸಿ, 18 ಪ್ಯಾಸೆಂಜರ್ ರೈಲುಗಳು ರದ್ದು; ಇಲ್ಲಿದೆ ಮಾಹಿತಿ
ದಕ್ಷಿಣ ಮಧ್ಯ ರೈಲ್ವೆ ಇತ್ತೀಚೆಗೆ ಮತ್ತೊಂದು ಪ್ರಮುಖ ಘೋಷಣೆ ಮಾಡಿದೆ. ನಿರ್ವಹಣ ಕಾರ್ಯದ ಹಿನ್ನೆಲೆ 18 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸುತ್ತಿರೋದಾಗಿ ಹೇಳಿದೆ. ರದ್ದುಗೊಂಡಿರುವ ರೈಲುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇಡ್ಚಲ್-ಉಮದ್ ನಗರ, ಮೇಡ್ಚಲ್-ಸಿಕಂದರಾಬಾದ್, ಸಿಕಂದರಾಬಾದ್- ಮೇಡ್ಚಲ್, ಉಮದ್ ನಗರ- ಮೇಡ್ಚಲ್, ಸಿಕಂದರಾಬಾದ್ -ಉಮದ್ ನಗರ ರೈಲುಗಳು ರದ್ದಾಗಿವೆ.
2/ 7
ಫೆಬ್ರವರಿ 8 ರಿಂದ 13 ರವರೆಗೆ ಈ ರೈಲುಗಳನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
3/ 7
ಈ ತಿಂಗಳ 10 ರಿಂದ 13 ರವರೆಗೆ ಇನ್ನೂ ಎರಡು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಘೋಷಿಸಿದೆ (ಸಾಂದರ್ಭಿಕ ಚಿತ್ರ)
4/ 7
ಕಾಚಿಗುಡ-ಕರ್ನೂಲ್ ಸಿಟಿ (ರೈಲ್ವೇ ನಂಬರ್17435) ಮತ್ತು ಕರ್ನೂಲ್ ಸಿಟಿ-ಕಾಚಿಗೂಡ್ (ರೈಲ್ವೇ ನಂಬರ್ 17436) ರೈಲುಗಳು ಫೆಬ್ರವರಿ 10 ರಿಂದ 13 ರವರೆಗೆ ರದ್ದುಗೊಳ್ಳಲಿವೆ ಎಂದು ಮಾಹಿತಿ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
5/ 7
ನಿರ್ವಹಣಾ ಕಾರ್ಯದ ಹಿನ್ನೆಲೆ ಈ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಸೇವೆಯ ಅಡಚಣೆಗೆ ಪ್ರಯಾಣಿಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. (ಫೋಟೋ ಟ್ವಿಟರ್)
6/ 7
ಕಳೆದ ವಾರವೂ ಸುಮಾರು ಎಂಟು ರೈಲುಗಳ ಸಂಚಾರವನ್ನು ತಾತ್ಕಲಿಕವಾಗಿ ರದ್ದುಗೊಳಿಸಿತ್ತು. ಇದೀಗ ಮತ್ತೆ 18 ರೈಲುಗಳ ಸಂಚಾರ ಸ್ಥಗಿತಗೊಂಡಿದೆ. (ಸಾಂದರ್ಭಿಕ ಚಿತ್ರ)
7/ 7
ಒಂದು ತಿಂಗಳು ಮುಂಚೆಯೇ ರೈಲ್ವೇ ಆಸನಗಳನ್ನು ಕಾಯ್ದಿರಿಸಿಕೊಂಡಿರುವ ಪ್ರಯಾಣಿಕರು ಕೊನೆ ಕ್ಷಣದಲ್ಲಿ ತಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳಬೇಕಾಗಿದೆ. (ಸಾಂದರ್ಭಿಕ ಚಿತ್ರ)