ವಂದೇ ಭಾರತ್ ಸೆಮಿ-ಹೈ ಸ್ಪೀಡ್ ರೈಲುಗಳು ದೇಶದಲ್ಲಿ ಪ್ರಚಲಿತವಾಗುತ್ತಿವೆ. ಪ್ರಯಾಣಿಕರೂ ಕೂಡ ಬಹಳ ಇಷ್ಟಪಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರೈಲ್ವೆ ಸಚಿವಾಲಯ ವಂದೇ ಭಾರತ್ ರೈಲುಗಳ ಉತ್ಪಾದನೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇನ್ನೆರಡು ತಿಂಗಳಲ್ಲಿ ಆರು ವಂದೇ ಭಾರತ್ ರೈಲು ತಯಾರಾಗಲಿವೆ. ಮಾರ್ಚ್ ವರೆಗೆ ದೇಶದಲ್ಲಿ ಒಟ್ಟು 16 ವಂದೇ ಭಾರತ್ ರೈಲುಗಳು ಸಂಚಾರಿಸಲಿವೆ. ರೈಲ್ವೆ ಸಚಿವಾಲಯ ಆಗಸ್ಟ್ ವರೆಗೆ 75 ವಂದೇ ಭಾರತ್ ರೈಲುಗಳನ್ನು ಹಳಿಗಿಳಿಸುವ ಗುರಿ ಹೊಂದಿದೆ. (ಸಾಂಕೇತಿಕ ಚಿತ್ರ)
ಐದನೇ ವಂದೇ ಭಾರತ್ ರೈಲು ಚೆನ್ನೈನಿಂದ ಮೈಸೂರಿಗೆ, ಆರನೇ ವಂದೇ ಭಾರತ್ ನಾಗ್ಪುರ ಮತ್ತು ಬಿಲಾಸ್ಪುರ್ ನಡುವೆ ಸಂಚಾರ ಆರಂಭಿಸಿತ್ತು. ಅದೇ ರೀತಿ, ಹೌರಾದಿಂದ ನ್ಯೂ ಜಲ್ಪೈಗುರಿಗೆ ಏಳನೇ ವಂದೇ ಭಾರತ್ ರೈಲು ಮತ್ತು ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ಎಂಟನೇ ವಂದೇ ಭಾರತ್ ರೈಲು ಪ್ರಾರಂಭಿಸಲಾಗಿತ್ತು. ಇತ್ತೀಚೆಗೆ ಮುಂಬೈನಿಂದ ಶಿರಡಿಗೆ ಮತ್ತು ಮುಂಬೈನಿಂದ ಸೋಲಾಪುರಕ್ಕೆ ಪ್ರಾರಂಭವಾಗಿದೆ. (ಸಾಂಕೇತಿಕ ಚಿತ್ರ)