ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬ ಸಮೇತ ಭಾರತಕ್ಕೆ 2 ದಿನದ ಭೇಟಿ ನೀಡುತ್ತಿದ್ಧಾರೆ. ಗುಜರಾತ್ ರಾಜ್ಯದ ಅಹ್ಮದಾಬಾದ್ಗೆ ಬಂದಿಳಿಯುವ ಅವರು ಸೋಮವಾರ ಸಂಜೆಯೇ ದೆಹಲಿಗೆ ಹೋಗಲಿದ್ದಾರೆ. ರಾತ್ರಿ ಅಲ್ಲಿಯೇ ಅವರದ್ದು ವಾಸ್ತವ್ಯ. ನವದೆಹಲಿಯಲ್ಲರುವ ಪ್ರತಿಷ್ಠಿತ ಐಟಿಸಿ ಮೌರ್ಯ ಹೋಟೆಲ್ನಲ್ಲೇ ಅತ್ಯಂತ ದುಬಾರಿ ಎನಿಸಿರುವ ಚಾಣಕ್ಯ ಸ್ಯೂಟ್ ಈಗ ಟ್ರಂಪ್ ಆತಿಥ್ಯಕ್ಕೆ ಸನ್ನದ್ಧವಾಗಿದೆ. ಬರೋಬ್ಬರಿ 4,600 ಚದರ ಅಡಿ ವಿಸ್ತೀರ್ಣ ಹೊಂದಿರುವ ಚಾಣಕ್ಯ ಸ್ಯೂಟ್ನಲ್ಲಿ ಒಂದು ರಾತ್ರಿಗೆ 8 ಲಕ್ಷ ರೂಪಾಯಿ ದರ ಹೊಂದಿದೆ. ಡೊನಾಲ್ಡ್ ಟ್ರಂಪ್ ಮತ್ತವರ ಹೆಂಡತಿ ಮೆಲಾನಿಯಾ ಇಬ್ಬರೂ ಇಲ್ಲಿ ಸೋಮವಾರ ರಾತ್ರಿ ತಂಗಲಿದ್ಧಾರೆ. ಈ ಮೇಲಿನ ಚಿತ್ರದಲ್ಲಿ ಹೋಟೆಲ್ ಸ್ಯೂಟ್ನ ಪ್ರವೇಶ ದ್ವಾರವಿದೆ.