ಭಾರತದ ಹಲವು ರಾಜ್ಯಗಳಲ್ಲಿ ಈಗ ಚಳಿಯ ತಾಪಮಾನ ಏರಿಕೆಯಾಗಿದೆ. ಹೊರಗೆ ಚುಮುಗುಡುವ ಚಳಿ ಜನರನ್ನು ಗಢಗಢ ನಡುಗುಸುತ್ತಿದೆ. ಇದು ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ಹೆಚ್ಚು ಪರಿಣಾಮ ಬೀರಿದೆ. ತೀವ್ರವಾದ ಚಳಿಯು ಭಾರತದ ಹಲವಾರು ರಾಜ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಅವುಗಳಲ್ಲಿ, ಕಡಿಮೆ ಗೋಚರತೆ ಸಾರಿಗೆ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿದೆ. ಭಾರತೀಯ ಹವಾಮಾನ ಇಲಾಖೆಯು ಹಲವು ಸ್ಥಳಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಇದಲ್ಲದೆ, ಹಲವೆಡೆ ಚಳಿಯ ವಾತಾವರಣ ಹೀಗೆ ಮುಂದುವರಿಯಲಿದೆ ಎಂದು ವರದಿಯಾಗಿದೆ.
ದೆಹಲಿ, ಉತ್ತರಾಖಂಡ, ಚಂಡೀಗಢ, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ ಎಂದು IMD ಮುನ್ಸೂಚನೆ ನೀಡಿದೆ. ಈ ವರದಿ ಮಾಡುತ್ತಿದ್ದಂತೆ "ಉತ್ತರ ಭಾರತದಲ್ಲಿ ಚಾಲ್ತಿಯಲ್ಲಿರುವ ಶೀತ ಅಲೆಯ ನಡುವೆ, ರಾಜಸ್ಥಾನದ ಬಿಕಾನೇರ್ನಲ್ಲಿ ಕನಿಷ್ಠ ತಾಪಮಾನ 0 ° C ಮತ್ತು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ನೌಗಾಂಗ್ನಲ್ಲಿ 0.2 ° C ದಾಖಲಾಗಿದೆ".
ಅಯನಗರ್, ದೆಹಲಿ (1.8 ಡಿಗ್ರಿ ಸೆಲ್ಸಿಯಸ್): ಭಾರತದ ರಾಜಧಾನಿಯಲ್ಲಿ ತಡೆಯಲಾಗದಂತಹ ಚಳಿಯಿಂದಾಗಿ ಅನೇಕ ಮಂದಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರೀ ಚಳಿಯಿಂದಾಗಿ ಮನೆಯಿಲ್ಲದೇ ಇರುವ ಬೀದಿ ಪ್ರಾಣಿಗಳು ಬದುಕುವುದೇ ದೊಡ್ಡ ಸವಾಲಾಗಿದೆ. ಪ್ರತಿನಿತ್ಯ ಈ ಪ್ರಾಣಿಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಇದಲ್ಲದೆ, ಮಂಜಿನ ಪರಿಣಾಮವು ಜನರ ದೈನಂದಿನ ಜೀವನದ ಮೇಲೆ ಅಡಚಣೆಯನ್ನುಂಟು ಮಾಡುತ್ತಿದೆ.
ಹಿಸಾರ್, ಹರಿಯಾಣ ಮತ್ತು ಸಫ್ದರ್ಜಂಗ್, ದೆಹಲಿ (4 ಡಿಗ್ರಿ ಸೆಲ್ಸಿಯಸ್): ಹರಿಯಾಣದಲ್ಲೂ ಇದೇ ಚಳಿಯ ಪರಿಸ್ಥಿತಿ ಇದೆ. ಪ್ರತಿಯೊಬ್ಬರೂ ತಂಪಾದ ವಾತಾವರಣದಿಂದ ಶೀತದ ಪ್ರಭಾವಕ್ಕೆ ಒಳಗಾಗಿದ್ದಾರೆ. ಹರಿಯಾಣದಲ್ಲೂ ಕನಿಷ್ಠ ನಾಲ್ಕು ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರ್ಸಾ, ಜಿಂದ್, ಕುರುಕ್ಷೇತ್ರ, ಹಿಸಾರ್, ಅಂಬಾಲಾ ಮತ್ತು ರೇವಾರಿ ಜಿಲ್ಲೆಗಳಂತಹ ಹಲವಾರು ಪ್ರದೇಶಗಳಲ್ಲಿ IMD ರೆಡ್ ಅಲರ್ಟ್ ನೀಡಿದೆ. ಅಲ್ಲದೆ, ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲೂ ಇಷ್ಟೇ ತಾಪಮಾನ ದಾಖಲಾಗಿದೆ.