Newyorkನ Brooklyn ಸಬ್ವೇನಲ್ಲಿ ಗುಂಡಿನ ದಾಳಿ; 13 ಮಂದಿಗೆ ಗಾಯ
ರೈಲು ನಿಲ್ದಾಣದಲ್ಲಿ ಸ್ಫೋಟಗೊಳ್ಳದ ಸಾಧನಗಳು ಕಂಡುಬಂದಿವೆ. ಮಂಗಳವಾರ 8:30 ಕ್ಕೆ ಜನಸಂದಣಿಯ ಸಮಯದಲ್ಲಿ ಈ ದಾಳಿ ನಡೆದಿದ್ದು, ಸಾವಿನ ಕುರಿತು ಕೂಡ ವರದಿ ಆಗಿದೆ. (Photo Credit: NYPD Twitter Page)
ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಮೆಟ್ರೊ ನಿಲ್ದಾಣದ ಸುರಂಗಮಾರ್ಗ ಮಾರ್ಗದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
2/ 7
ಇದೇ ವೇಳೆ ರೈಲು ನಿಲ್ದಾಣದಲ್ಲಿ ಸ್ಫೋಟಗೊಳ್ಳದ ಸಾಧನಗಳು ಕಂಡುಬಂದಿವೆ. ಮಂಗಳವಾರ 8:30 ಕ್ಕೆ ಜನಸಂದಣಿಯ ಸಮಯದಲ್ಲಿ ಈ ದಾಳಿ ನಡೆದಿದ್ದು, ಸಾವಿನ ಕುರಿತು ಕೂಡ ವರದಿ ಆಗಿದೆ.
3/ 7
ಘಟನೆ ನಡೆದ ಸ್ಥಳದಲ್ಲಿ ಹಲವಾರು ಜನರು ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯಗಳು ಕಂಡು ಬಂದಿದೆ. ದಾಳಿಕೋರ ಐದು ಅಡಿ ಐದು ಇಂಚಿನ ವ್ಯಕ್ತಿಯಾಗಿದ್ದು, ಆತ ಮಾಸ್ಕ್ ಧರಿಸಿ ಈ ದಾಳಿ ನಡೆಸಿದ್ದಾನೆ. ಆತನ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4/ 7
ಸದ್ಯ ಘಟನಾ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಈ ಗುಂಡಿನ ದಾಳಿಯಿಂದ ಲವಾರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಲು ಮೇಯರ್ ಎರಿಕ್ ಆಡಮ್ಸ್ ನಿರಾಕರಿಸಿದ್ದಾರೆ
5/ 7
ಗ್ಯಾಸ್ ಮಾಸ್ಕ್ ಮತ್ತು ಕಿತ್ತಳೆ ಬಣ್ಣದ ಉಡುಪನ್ನು ಧರಿಸಿದ ವ್ಯಕ್ತಿಯಿಂದ ಈ ದಾಳಿ ನಡೆದಿದ್ದು, ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. ಆಗಂತುಕ ಐದು ಗುಂಡು ಹಾರಿಸಿದ್ದಾನೆ. ನಿಲ್ದಾಣದೊಳಗೆ ಹೊಗೆಯಾಡುತ್ತಿರುವ ಬಗ್ಗೆಯೂ ಮಾಹಿತಿ ಇದೆ
6/ 7
ಈ ಸಂಬಂಧ ಟ್ವೀಟ್ ಮಾಡಿರುವ ನ್ಯೂಯಾರ್ಕ್ ಪೊಲೀಸರು, ಗುಂಡಿನ ದಾಳಿ ಘಟನೆ ಕುರಿತು ತನಿಖೆ ನಡೆಯುತ್ತಿದೆ
7/ 7
ಬ್ರೂಕ್ಲಿನ್ನಲ್ಲಿರುವ 36 ನೇ ಸ್ಟ್ರೀಟ್ ಮತ್ತು 4 ನೇ ಅವೆನ್ಯೂ ಪ್ರದೇಶದಲ್ಲಿ ಸಂಚಾರ ತಪ್ಪಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ತುರ್ತು ವಾಹನಗಳು ಸಿಲುಕಿಗೊಂಡಿರುವ ವರದಿ ಆಗಿದೆ.