ಸೋಲಿನ ನಂತರ ಅಮೇಥಿಯಿಂದ ಅಂತರ ಕಾಯ್ದು ಕೊಂಡಿದ್ದ ರಾಹುಲ್ ಗಾಂಧಿ ಜನಪ್ರಿಯತೆ ಇದೀಗ ಹೆಚ್ಚಾಗಿದೆಯಂತೆ. ಇತ್ತೀಚೆಗೆ ಅಮೇಥಿಯಲ್ಲಿ ರಾಹುಲ್ ಗಾಂಧಿ 20,000 ಹೊದಿಕೆಗಳನ್ನು ವಿತರಿಸಿದ್ದರು. ಈ ಹಿಂದೆ, ಕೊರೊನಾ ಅವಧಿಯಲ್ಲೂ ರಾಹುಲ್ ಅಮೇಥಿಗೆ ಆಮ್ಲಜನಕ ಮತ್ತು ಔಷಧಿಗಳನ್ನು ಕಳುಹಿಸಿದ್ದರು. ಪಕ್ಷದ ಈ ಆಂತರಿಕ ವರದಿಯ ನಂತರ ಈಗ ಅಮೇಠಿಯಲ್ಲಿ ಚಟುವಟಿಕೆ ಮತ್ತಷ್ಟು ಹೆಚ್ಚಾಗಲಿದೆ.