Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

ಮುಂಬೈ: ವಯಸ್ಸಿನ ಕಾರಣಕ್ಕೆ ಮತ್ತು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಶರದ್ ಅವರು ಕೊನೆಗೂ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

First published:

 • 17

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಶರದ್ ಪವಾರ್ ರಾಜೀನಾಮೆ ಘೋಷಿಸುತ್ತಿದ್ದಂತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಅಸಮಾಧಾನಪಡಿಸಿ ನೀವೇ ಆ ಸ್ಥಾನದಲ್ಲಿ ಮುಂದುವರಿಯಬೇಕೆಂದು ಒತ್ತಡ ಹೇರಿದ್ದರು. ಕೆಲವೆಡೆ ಕಾರ್ಯಕರ್ತರು ಪ್ರತಿಭಟನೆಯನ್ನೂ ಮಾಡಿದ್ದರು.

  MORE
  GALLERIES

 • 27

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಈ ಮಧ್ಯೆ ಎನ್‌ಸಿಪಿಯ 18 ಸದಸ್ಯರ ಸಮಿತಿಯು ಶರದ್ ಪವಾರ್ ಅವರ ರಾಜೀನಾಮೆಯನ್ನ ತಿರಸ್ಕರಿಸಿದ್ದು ಮಾತ್ರವಲ್ಲದೇ ತಾವೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿತ್ತು.

  MORE
  GALLERIES

 • 37

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಎಲ್ಲರ ಒತ್ತಾಯಕ್ಕೆ ಮಣಿದಿರುವ ಶರದ್ ಪವಾರ್ ಅವರು ಶುಕ್ರವಾರ ಸಂಜೆ ವೈಬಿ ಚವ್ಹಾಣ್ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.

  MORE
  GALLERIES

 • 47

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಈ ವೇಳೆ ಮಾತನಾಡಿದ ಅವರು, ‘ನಾನು ರಾಜಕೀಯ ಜೀವನದಲ್ಲಿ 66 ವರ್ಷಗಳನ್ನ ಪೂರ್ಣಗೊಳಿಸಿದ್ದು, ಇಷ್ಟು ದೀರ್ಘ ಇನ್ನಿಂಗ್ಸ್ ನಂತರ ವಿಶ್ರಾಂತಿ ಪಡೆಯಲು ಬಯಸಿದ್ದೆ. ಆದರೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಮತ್ತು ಜನರಲ್ಲಿ ಅಸಮಾಧಾನದ ಪ್ರತಿಕ್ರಿಯೆ ಇತ್ತು. ಭಾರತದಾದ್ಯಂತ ಮತ್ತು ಮಹಾರಾಷ್ಟ್ರದ ರಾಜಕಾರಣಿಗಳು ಕೂಡ ರಾಜೀನಾಮೆ ವಾಪಸ್ ಪಡೆಯಲು ಸೂಚಿಸಿದರು’ ಎಂದಿದ್ದಾರೆ.

  MORE
  GALLERIES

 • 57

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಅಲ್ಲದೇ, ‘ಸಮಿತಿಯು ತೆಗೆದುಕೊಂಡ ನಿರ್ಧಾರದ ನಂತರ ನಾನು ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯ ನಿರ್ಧಾರವನ್ನ ಹಿಂತೆಗೆದುಕೊಂಡಿದ್ದೇನೆ. ಆದರೆ ಪಕ್ಷದಲ್ಲಿ ಹೊಸ ನಾಯಕತ್ವವನ್ನ ರಚಿಸಬೇಕು ಎಂದು ನಾನು ವಿನಂತಿಸುತ್ತೇನೆ ಮತ್ತು ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ' ಎಂದು ಪವಾರ್ ಹೇಳಿದ್ದಾರೆ.

  MORE
  GALLERIES

 • 67

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಪಕ್ಷದಲ್ಲಿ ಯಾವುದೇ ಹುದ್ದೆ ಅಥವಾ ಜವಾಬ್ದಾರಿಗಾಗಿ ‘ಉತ್ತರಾಧಿಕಾರಿ ಯೋಜನೆ’ ಇರಬೇಕು ಎಂದಿರುವ ಶರದ್ ಪವಾರ್, ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಮಾಡುವುದು, ಹೊಸ ಜವಾಬ್ದಾರಿಗಳನ್ನು ನಿಯೋಜಿಸುವುದು ಮತ್ತು ಹೊಸ ನಾಯಕತ್ವವನ್ನು ರಚಿಸುವುದು ಅಗತ್ಯ ಎಂದಿದ್ದಾರೆ.

  MORE
  GALLERIES

 • 77

  Sharad Pawar: ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಮಣಿದು ರಾಜೀನಾಮೆ ನಿರ್ಧಾರ ವಾಪಸ್ ಪಡೆದ ಶರದ್ ಪವಾರ್!

  ಹಿರಿಯ ರಾಜಕಾರಣ ಶರದ್ ಪವಾರ್ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ವಾಪಸ್ ಹಿಂದಕ್ಕೆ ಪಡೆದಿರುವುದು ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.

  MORE
  GALLERIES