ಸರ್ಬಿಯಾ ರಾಜಧಾನಿ ಕೇಂದ್ರ ಬೆಲ್‌ಗ್ರೇಡ್‌ನ ವ್ಲಾಡಿಸ್ಲಾವ್ ರಿಬ್ನಿಕಾರ್ ಪ್ರೈಮರಿ ಶಾಲೆಯಲ್ಲಿ ನಿನ್ನೆ ಬೆಳಗ್ಗೆ 8.40ರ ಸುಮಾರಿಗೆ ಈ ಭೀಕರ ಘಟನೆ ನಡೆದಿದ್ದು, ಶೂಟೌಟ್ ಮಾಡಿದ ಬಾಲಕ ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
2/ 7
ತರಗತಿಗೆ ಪಿಸ್ತೂಲ್ ತಂದಿದ್ದ ಬಾಲಕ ಮೊದಲು ತನ್ನ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿ ನಂತರ ಸಹಪಾಠಿಗಳು ಮತ್ತು ಸೆಕ್ಯೂರಿಟಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸರ್ಬಿಯಾದ ಸಚಿವರು ಹೇಳಿದ್ದಾರೆ.
3/ 7
ಗುಂಡು ಹಾರಿಸಿ ಎಂಟು ಜನರ ಕೊಲೆಗೆ ಕಾರಣನಾದ ಬಾಲಕನನ್ನು ಶಾಲಾ ಆವರಣದಲ್ಲೇ ಪೊಲೀಸರು ಬಂಧಿಸಿದ್ದು, ಈತ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
4/ 7
ತನ್ನ ತಂದೆಯ ಬಂದೂಕನ್ನು ಶಾಲೆಗೆ ತಂದಿದ್ದ ಆರೋಪಿಯು ಮನಸೋಇಚ್ಛೆ ಅಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
5/ 7
2009ರಲ್ಲಿ ಜನಿಸಿರುವ ಕೊಲೆ ಆರೋಪಿ ಬಾಲಕ ನಿನ್ನೆ ಬೆಳಿಗ್ಗೆ 8.40ರ ವೇಳೆಗೆ ಗುಂಡಿನ ದಾಳಿ ನಡೆಸಿದ್ದಾನೆ. ಆಗಷ್ಟೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
6/ 7
ಸರ್ಬಿಯಾದಲ್ಲಿ ಇಂತಹ ಘಟನೆ ನಡೆಯುತ್ತಿರೋದು ಇದೇ ಮೊದಲಲ್ಲ. 2013ರಲ್ಲಿ ಸೆಂಟ್ರಲ್ ಸರ್ಬಿಯಾದ ಗ್ರಾಮದಲ್ಲಿ 13 ಮಂದಿಯನ್ನು ಕೊಲೆ ಮಾಡಲಾಗಿತ್ತು.
7/ 7
ಸದ್ಯ ಗುಂಡು ಹೊಡೆದು ಕೊಲೆ ಮಾಡಿರುವ ಬಾಲಕನ ಹೆಸರನ್ನು ಪೊಲೀಸರು ಸಾರ್ವಜನಿಕಗೊಳಿಸಿಲ್ಲ. ಆತನ ಬಂಧನದ ವೇಳೆ ಮುಖಕ್ಕೆ ಕವರ್ ಹಾಕಿ ಕರೆದೊಯ್ದಿದ್ದಾರೆ.
First published:
17
Crime News: ಶಾಲೆಯಲ್ಲಿ ಸಹಪಾಠಿಗಳ ಮೇಲೆ ವಿದ್ಯಾರ್ಥಿಯಿಂದ ಗುಂಡಿನ ದಾಳಿ! ಎಂಟು ಸಾವು