ಬಿಸಿ ರಕ್ತದ ಯುವ ಜನತೆ ತಾಳ್ಮೆ ಕಳೆದುಕೊಂಡು ಕಾನೂನು ಕೈಗೆತ್ತಿಕೊಳ್ಳುತ್ತಿರುವುದು ನಿಜ. ಆದರೆ ಈ ಪ್ರಕರಣದಲ್ಲಿ ಆಗಿರುವುದೇ ಬೇರೆ..
2/ 7
ತಾಳ್ಮೆ, ಸಂಬಂಧ ಮಧ್ಯೆ ಸಾಮರಸ್ಯ ಇಲ್ಲವಾದರೆ ಸಣ್ಣ ವಿಷಯಗಳು ಹೇಗೆ ವಿಕೋಪಕ್ಕೆ ಹೋಗುತ್ತವೆ ಎನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕೆ ಮಾವ ತನ್ನ ಸೊಸೆಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)
3/ 7
ಬೆಳಗಿನ ಉಪಾಹಾರ ನೀಡದಿದ್ದಕ್ಕೆ ಸೊಸೆಯನ್ನು ಗುಂಡಿಕ್ಕಿ ಕೊಂದ 76 ವರ್ಷದ ಥಾಣೆ ನಿವಾಸಿಯೊಬ್ಬರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)
4/ 7
ಕಾಶಿನಾಥ್ ಪಾಂಡುರಂಗ ಪಾಟೀಲ ಅವರು ಗುರುವಾರ ಬೆಳಿಗ್ಗೆ ತಮ್ಮ ರಾಬೋಡಿ ಮನೆಯಲ್ಲಿ ತಮ್ಮ ಸೊಸೆ ಸೀಮಾ ರವೀಂದ್ರ ಪಾಟೀಲ್ (42) ಅವರ ಮೇಲೆ ತಮ್ಮ ರಿವಾಲ್ವರ್ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದರು.
5/ 7
ಶುಕ್ರವಾರ ಬೆಳಿಗ್ಗೆ ಹತ್ತಿರದ ಆಸ್ಪತ್ರೆಯಲ್ಲಿ ಸೊಸೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾವ ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾರೆ.
6/ 7
ಕೊಲೆ ಮತ್ತು ಇತರ ಅಪರಾಧಗಳಿಗಾಗಿ ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ರಾಬೋಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಸಂತೋಷ್ ಘಾಟೇಕರ್ ತಿಳಿಸಿದ್ದಾರೆ.
7/ 7
ರಾಬೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ. (ಸಾಂದರ್ಭಿಕ ಚಿತ್ರ)