PHOTOS: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: ಓರ್ವ ಸಾವು, 28ಕ್ಕೂ ಹೆಚ್ಚು ಜನರಿಗೆ ಗಾಯ ಜಮ್ಮು-ಕಾಶ್ಮೀರದ ಜನನಿಬಿಡ ಮಾರ್ಕೆಟ್ ಪ್ರದೇಶದ ಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು, ಒಬ್ಬಾತನ ಸಾವು ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ 28 ಜನರು ಗಾಯಗೊಂಡಿದ್ದಾರೆ. News18 | March 07, 2019, 17:07 IST
1 / 16
ಜಮ್ಮು-ಕಾಶ್ಮೀರದ ಜನನಿಬಿಡ ಮಾರ್ಕೆಟ್ ಪ್ರದೇಶದ ಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ.
2 / 16
ದಕ್ಷಿಣ ಕಾಶ್ಮೀರದ ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ಧಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
3 / 16
ಬಸ್ ಒಳಗೆ ಪ್ರಬಲ ಗ್ರೆನೇಡ್ ಫಿಕ್ಸ್ ಮಾಡಲಾಗಿದ್ದು, ಸ್ಪೋಟಿಸಲಾಗಿದೆ ಎಂದು ತಿಳಿದುಬಂದಿದೆ.
4 / 16
ಬಸ್ನಲ್ಲಿ ಎಷ್ಟು ಜನ ಇದ್ದರೂ ಎಂಬ ಬಗ್ಗೆ ಮಾಹಿತಿ ಇಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
5 / 16
ದಾಳಿಯ ತೀವ್ರತೆ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.
6 / 16
ಗಾಯಾಳುಗಳನ್ನು ಜಮ್ಮುವಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
7 / 16
ಮೊದಲಿಗೆ ಟೈರ್ ಸ್ಪೋಟಗೊಂಡಿತು. ಆದರೆ, ಇದು ತೀವ್ರಸ್ವರೂಪದ ಸ್ಪೋಟವಾಗಿತ್ತು. ತಕ್ಷಣ ಗಾಯಾಳು ರಕ್ಷಣೆಗೆ ಮುಂದಾದೆವು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
8 / 16
ಇದು ಗ್ರೆನೇಡ್ ದಾಳಿಯಾಗಿದ್ದು, 18 ಜನರು ಗಾಯಗೊಂಡಿದ್ದಾರೆ ಎಂದು ಜಮ್ಮುವಿನ ಐಜಿಪಿ ಎಂ.ಕೆ. ಸಿನ್ಹಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
9 / 16
ಸ್ಪೋಟಗೊಂಡಿರುವ ಪ್ರದೇಶ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಿಂದ ಸ್ವಲ್ಪ ದೂರದಲ್ಲಿಯೇ ನಡೆದಿದೆ.
10 / 16
ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿರುವ ಮಧ್ಯೆ ಈ ಸ್ಪೋಟ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿದೆ.
11 / 16
ಫೆ.14ರಂದು ಪುಲ್ವಾಮದಲ್ಲಿ ಆತ್ಮಹುತಿ ದಾಳಿಕೋರನೊಬ್ಬ ಸೇನಾ ಬಸ್ ಮೇಲೆ ದಾಳಿ ನಡೆಸಿದ ಪರಿಣಾಮ 40 ಸಿಆರ್ಪಿಎಫ್ ಯೋಧರು ಸಾವನ್ನಪ್ಪಿದ್ದರು.
12 / 16
ಎರಡು ತಿಂಗಳ ಹಿಂದೆಯೂ ಮುಖ್ಯ ಬಸ್ ನಿಲ್ದಾಣದ ಬಳಿ ಇದೇ ರೀತಿಯಲ್ಲಿ ಗ್ರೆನೇಡ್ ಸ್ಫೋಟ ನಡೆಸಲಾಗಿತ್ತು.
13 / 16
ಅದೃಷ್ಟಕ್ಕೆ ಗಾಳಿಯಲ್ಲಿ ಗ್ರಿನೇಡ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
14 / 16
ಉಗ್ರರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
15 / 16
ಇನ್ನು ಬಸ್ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಬಸ್ಗಳು ಸೇರಿದಂತೆ ಪ್ರಯಾಣಿಕರಿಗೆ ಬಸ್ ನಿಲ್ದಾಣದೊಳಗೆ ಪ್ರವೇಶ ನಿಷೇಧಿಸಲಾಗಿದೆ.
16 / 16
ಇದುವರೆಗೆ ಯಾವುದೇ ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಸ್ಫೋಟ ಸಂಬಂಧ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೇನೆ ಹಾಗೂ ಪೊಲೀಸರು ತಿಳಿಸಿದ್ದಾರೆ.
First published: March 07, 2019, 17:07 IST