ಎಸ್ಬಿಐ ಗ್ರಾಹಕರಿಗೆ ಬಂಪರ್ ಕೊಡುಗೆ; ಬ್ಯಾಂಕ್ನಿಂದ 5 ಲೀಟರ್ ಪೆಟ್ರೋಲ್ ಉಚಿತ
ಸರ್ಕಾರಿ ಮಾಲೀಕತ್ವದ ಎಸ್ಬಿಐ ಬ್ಯಾಂಕ್ ಇದೇ ಮೊದಲ ಬಾರಿಗೆ ತನ್ನ ಗ್ರಾಹಕರಿಗೆ ಈ ರೀತಿ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಐದು ಲೀಟರ್ ಪೆಟ್ರೋಲ್ ಪಡೆಯಬೇಕೆಂದರೆ ನೀವು ಮಾಡಬೇಕಾಗಿರುವುದು ಇಷ್ಟೆ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್ನಲ್ಲಿ ನೀವು ಏನಾದರೂ ಪೆಟ್ರೋಲ್ ಹಾಕಿಸಿಕೊಂಡು ಸರ್ಕಾರಿ ಆ್ಯಪ್ ಆದ ಭೀಮ್ ಮೂಲಕ ಹಣ ವರ್ಗಾವಣೆ ಮಾಡಿದರೆ, ನೀವು ಉಚಿತವಾಗಿ ಐದು ಲೀಟರ್ ಪೆಟ್ರೋಲ್ ಹಾಗೂ ಗ್ಯಾಸ್ ಪಡೆಯಬಹುದು.
2/ 5
ಈ ಉಚಿತ ಪೆಟ್ರೋಲ್ ಪಡೆಯಲು ಕನಿಷ್ಠ 100 ರೂಪಾಯಿ ಪೆಟ್ರೋಲ್ ನೀವು ನಿಮ್ಮ ವಾಹನಕ್ಕೆ ತುಂಬಿಸಿಕೊಳ್ಳಬೇಕು. ಬಳಿಕ ಭೀಮ್ ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡಿದ ಬಳಿಕ ಬರುವ ಸಂದೇಶವನ್ನು ಅನ್ನು 9222222084ಗೆ ಫೋನ್, ಮೆಸೇಜ್ ಮಾಡಬೇಕು.
3/ 5
ಈ ಪ್ರಕ್ರಿಯೆ ಬಳಿಕ ನೀವು ಪೆಟ್ರೋಲ್ ಬಂಕ್ನಲ್ಲಿ ಉಚಿತವಾಗಿ 5ಲೀಟರ್ ಇಂಧನ ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಎಸ್ಬಿಐ ವೆಬ್ಸೈಟ್ನಲ್ಲಿಯೂ ಪಡೆಯಬಹುದಾಗಿದೆ.
4/ 5
ಅಲ್ಲದೇ ಟೋಲ್ ಫ್ರೀ ನಂ 1800 22 8888ಗೆ ಕರೆ ಮಾಡಿ ಕಾಸ್ಟಮರ್ ಕೇರ್ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. ನಿಮಗೆ ಹೆಚ್ಚಿನ ಸಹಾಯಕ್ಕಾಗಿ help@xtrarewards.comಗೆ ಕೂಡ ಮೇಲ್ ಕಳುಹಿಸಬಹುದು.
5/ 5
ಈ ಆಫರ್ ನ.23ರವರೆಗೆ ಇದ್ದು ರಾತ್ರಿ 12ಗಂಟೆವರೆಗೆ ಜಾರಿಯಲ್ಲಿರಲಿದೆ. ಅದೃಷ್ಟಶಾಲಿ ಮೊಬೈಲ್ ನಂಬರ್ ಈ ವಿಶೇಷ ಕೊಡುಗೆಯನ್ನು ಎರಡು ಬಾರಿ ಕೂಡ ಹೊಂದುವ ಸಾಧ್ಯತೆ ಇದೆ.