ಎಸ್ಬಿಐ ಡಿಸೆಂಬರ್ 31ರಂದು ಈ ನಿಯಮದ ಸುತ್ತೋಲೆಯನ್ನು ಪ್ರಕಟಿಸಿದೆ. ಈ ಸುತ್ತೊಲೆಯಲ್ಲಿ ಅದು ಮಹಿಳಾ ಉದ್ಯೋಗಿಗಳು ಸರಿಯಾದ ಪ್ರಕ್ರಿಯೆ ಮೂಲಕ ಆಯ್ಕೆಯಾದರೂ ಮೂರು ತಿಂಗಳಿಗಿಂತ ಹೆಚ್ಚು ಗರ್ಭಿಣಿ ಮಹಿಳೆಯರನ್ನು ಕೆಲಸಕ್ಕೆ ಸೇರುವುದಕ್ಕೆ ನಿರಾಕರಿಸಿದೆ. ಜೊತೆಗೆ ಆಕೆಯನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುವುದು ಮತ್ತು ಮಗುವಿನ ಹೆರಿಗೆಯ ನಂತರ ನಾಲ್ಕು ತಿಂಗಳೊಳಗೆ ಅವಳನ್ನು ಸೇರಲು ಅನುಮತಿಸಬಹುದು ಎಂದು ಸುತ್ತೋಲೆ ಹೇಳುತ್ತದೆ.