ಪಾಟ್ನಾ(ಜ.25): ಋತುಚಕ್ರದ ಸಮಯದಲ್ಲಿ(Menstrual Periods) ಹುಡುಗಿಯರು(Girl) ಬಳಸುವ ಸ್ಯಾನಿಟರಿ ಪ್ಯಾಡ್ಗಳನ್ನು(Sanitary Pads) ಹುಡುಗರಿಗೂ(Boys) ವಿತರಣೆ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಇದರಿಂದ ಸರ್ಕಾರಿ ಶಾಲೆಗೆ ದಾಖಲಾದ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ಗಳನ್ನು ಒದಗಿಸುವ ಬಿಹಾರ ಸಿಎಂ ನಿತೀಶ್ ಕುಮಾರ್(Bihar CM Nitish Kumar) ಸರ್ಕಾರದ ಯೋಜನೆಯು ಅಗತ್ಯವಿಲ್ಲದ ಫಲಾನುಭವಿಗಳನ್ನು ತಲುಪಿದೆ ಎಂಬುದು ತಿಳಿದು ಬಂದಿದೆ.
ಈ ಅಕ್ರಮ ವ್ಯವಹಾರ ಸರನ್ ಜಿಲ್ಲೆಯ ಮಾಂಝಿ ಬ್ಲಾಕ್ನಲ್ಲಿರುವ ಸರ್ಕಾರಿ ಶಾಲೆಯಾದ ಹಲ್ಕೋರಿ ಸಾಹ್ ಪ್ರೌಢಶಾಲೆಯಲ್ಲಿ ನಡೆದಿದೆ. ಯೋಜನೆಯ ಅವ್ಯವಹಾರ ಇದೀಗ ಬೆಳಕಿಗೆ ಬಂದಿದ್ದು, ತನಿಖೆ ಪ್ರಗತಿ ಹಂತದಲ್ಲಿದೆ. ಶಾಲೆಯ ಹೆಡ್ಮಾಸ್ಟರ್ ಈ ಅಕ್ರಮಗಳನ್ನು ಪತ್ತೆ ಹಚ್ಚಿರುವುದಾಗಿ ತಿಳಿದು ಬಂದಿದೆ. ಹಲವು ವರ್ಷಗಳಿಂದ ಈ ಅಕ್ರಮ ವ್ಯವಹಾರ ನಡೆದಿರುವುದು ಇದೀಗ ಗೊತ್ತಾಗಿದೆ.