ಇನ್ನೂ ಶೋಯಬ್ ಮಲಿಕ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾಗಲೆ ತಮ್ಮ ಪ್ರೀತಿ ಮತ್ತು ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದ ಸಾನಿಯಾ ಮಿರ್ಜಾ, "ಶೋಯಬ್ ಮಲಿಕ್ ಪಾಕಿಸ್ತಾನದ ಪರವಾಗಿ ಆಟವಾಡಲು ಇಷ್ಟಪಡುತ್ತಾರೆ. ಅವರ ದಾಖಲೆಗಳ ಬಗ್ಗೆ ಅವರಿಗೆ ಹೆಮ್ಮೆ ಇದೆ. ಆದರೆ, ನಾನು ಮಾತ್ರ ನನ್ನ ದೇಶ ಭಾರತವನ್ನೇ ಬೆಂಬಲಿಸುತ್ತೇನೆ” ಎಂದು ಭರವಸೆ ನೀಡಿದ್ದರು. ಅಲ್ಲದೆ, ಈಗಲೂ ತಮ್ಮ ಮಾತಿಗೆ ಬದ್ಧವಾಗಿರುವುದಾಗಿ ಮಿರ್ಜಾ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾ ವೆಬ್‌ಸೈಟ್ ಎನಿಸಿಕೊಂಡಿರುವ ಸ್ಪೋಟ್ಸ್ ಕೀಡಾಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ವ್ಯಯಕ್ತಿಕ ಬದುಕಿನ ಬಗ್ಗೆ ಮಾತನಾಡಿರುವ ಸಾನಿಯಾ ಮಿರ್ಜಾ, “ನಾವು ಬಹಳ ಖುಷಿಯಿಂದ ಇದ್ದೇವೆ. ನಾವಿಬ್ಬರೂ ನಮ್ಮ ಸಂಬಂಧವನ್ನು ತುಂಬಾ ಹಗುರವಾಗಿಡಲು ಪ್ರಯತ್ನಿಸುತ್ತೇವೆ. ಯಾರಾದರೂ ನೋಡಿದವರು ಅವರು ನನಗಿಂತ ಹೆಚ್ಚು ಮಾತನಾಡುತ್ತಾರೆ ಎನ್ನುವ ವಿಶ್ವದ ನಂಬಿಕೆಗೆ ನಮ್ಮ ಬದುಕು ವಿರುದ್ಧವಾಗಿದೆ.
ಆದರೆ, ಅವರು ’ಭಾರತದ ವಿರುದ್ಧ ನನ್ನ ದಾಖಲೆ ಅತ್ಯುತ್ತಮವಾಗಿದೆ’ ಎನ್ನುತ್ತಿದ್ದರು. ಈಗಲೂ ಅವರು ಪಾಕಿಸ್ತಾನದ ಪರ ಆಡುತ್ತಾರೆ, ನಾನು ಭಾರತವನ್ನೇ ಬೆಂಬಲಿಸುತ್ತೇನೆ. ಆದರೂ ಅವರು ಬಹಳ ಸಮಯದಿಂದ ಇದ್ದಾರೆ ಮತ್ತು ಅವರು ಅದ್ಭುತ ವೃತ್ತಿಜೀವನವನ್ನು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ. ನಾನು ಅವರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ "ಎಂದು ಮಿರ್ಜಾ ತಿಳಿಸಿದ್ದಾರೆ.