PHOTOS: ಇಶಾ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿದ ವಿಶ್ವದ ಖ್ಯಾತನಾಮರು
ಏಷ್ಯಾದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿಯವರ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ. ಡಿಸೆಂಬರ್ 12 ರಂದು ಅದ್ದೂರಿ ವಿವಾಹ ನಡೆಯಲಿದ್ದು, ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಶ್ವದ ಖ್ಯಾತನಾಮ ಉದ್ಯಮಿಗಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಉದಯ್ಪುರ್ದತ್ತ ಆಗಮಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್, ಸಚಿನ್ ತೆಂಡುಲ್ಕರ್, ಉದ್ಯಮಿ ಲಕ್ಷ್ಮಿ ಮಿತ್ತಲ್ ಕುಟುಂಬ, ಹಫ್ಫಿಂಗ್ಟನ್ ಫೋಸ್ಟ್ನ ಅರಿಯಾನಾ ಹಫ್ಫಿಂಗ್ಟನ್, ನೆಸ್ಲೆ ಚೇರ್ಮನ್ ಎಮಿರಟಸ್, ಜೆಪಿ ಮೋರ್ಗನ್ ಚೇರ್ಮನ್ ನಿಕಾಲೊಸ್ ಅಗಜಿನ್, ಎಎನ್ಜೆಡ್ ಸಿಇಒ ಫರ್ಹಾನ್ ಫಾರೂಕಿ ಸೇರಿದಂತೆ ಅನೇಕ ಉದ್ಯಮಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಿನಿಮಾ ತಾರೆಯರಾದ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ದಂಪತಿ, ಸಲ್ಮಾನ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ಅನಿಲ್ ಕಪೂರ್, ಡೇವಿಡ್ ಧವನ್, ಜಾನ್ ಅಬ್ರಹಾಂ, ಜಾವೇದ್ ಜಫ್ರಿ, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ, ಕ್ರಿಕೆಟರ್ ಮಹೇಂದರ್ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಜೀವಾ, ತೆಂಡುಲ್ಕರ್ ಪುತ್ರಿ ಅಂಜಲಿ ಸೇರಿದಂತೆ ಖ್ಯಾತನಾಮರದ ಕುಟುಂಬ ಸದ್ಯಸರು ಕಾರ್ಯಕ್ರಮದಲ್ಲಿ ಪಾಲ್ಗೊಳಲು ಆಗಮಿಸಿದ್ದಾರೆ.