ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಪಟಾಕಿ ಸಿಡಿದು ನಡೆದ ಅವಘಡದಲ್ಲಿ ಮೂವರು ಗಾಯಗೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
ಸಂಜೆ 5 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಪಟಾಕಿ ತಯಾರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸನ್ನಿಧಾನಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3/ 8
ವಾರ್ಷಿಕ ತೀರ್ಥೋದ್ಭವದ ಸಂದರ್ಭದಲ್ಲಿ ದರ್ಶನಕ್ಕಾಗಿ ಬೆಟ್ಟದ ಮೇಲಿನ ದೇಗುಲದಲ್ಲಿ ಸೇರಿದ್ದ ಯಾವ ಯಾತ್ರಾರ್ಥಿಗಳಿಗೂ ಗಾಯವಾಗಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
4/ 8
ಈ ಅವಘಡದಲ್ಲಿ ಮೂವರಿಗೂ ಗಂಭೀರ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
5/ 8
ಗಾಯಗೊಂಡ ಮೂವರೂ ಸಹ ದೇವಸ್ಥಾನದ ಸಿಬ್ಬಂದಿಯೇ ಆಗಿದ್ದಾರೆ ಎಂದು ತಿಳಿದುಬಂದಿದೆ.
6/ 8
ಈಗಾಗಲೇ ದೇಶದ ಹಲವು ಭಾಗಗಳಿಂದ ಅಯ್ಯಪ್ಪನ ಸನ್ನಿಧಾನಕ್ಕೆ ಭಕ್ತರು ಹರಿದುಬರುತ್ತಿದ್ದಾರೆ.
7/ 8
ಭಕ್ತರು ಪ್ರವೋಹಾಪಾದಿಯಲ್ಲಿ ಆಗಮಿಸುತ್ತಿದ್ದು ಜನಜಂಗುಳಿ ನಿಯಂತ್ರಿಸಲು ದೇಗುಲದ ಆಡಳಿತ ಮಂಡಳಿ ವಿವಿಧ ಕ್ರಮ ಕೈಗೊಂಡಿದೆ.
8/ 8
ಭಕ್ತಾದಿಗಳಿಗೆ ಸರಿಯಾಗಿ ದರ್ಶನ ಸಿಗಬೇಕು ಎನ್ನುವ ಕಾರಣದಿಂದ ಭಕ್ತರ ಸಂಖ್ಯೆಯನ್ನು ದಿನಕ್ಕೆ 90 ಸಾವಿರಕ್ಕೆ ಮಿತಿಗೊಳಿಸಲಾಗಿದೆ.