ಆದರೆ ಇತ್ತೀಚೆಗೆ ಪೀಠೋಪಕರಣ, ಮನೆಯ ಕಿಟಕಿ, ಬಾಗಿಲುಗಳಿಗಾಗಿ ಈ ಮರವನ್ನು ಮನಬಂದಂತೆ ಕಡಿಯಲಾಗುತ್ತಿದೆ. ಕಡಿದ ಮರಗಳು ಸ್ಥಳದಲ್ಲಿಯೇ ಬಿದ್ದಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಣ್ಮರೆಯಾಗುತ್ತಿರುವ ಕಾಡುಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ರಾಜಸ್ಥಾನದ ರಾಜ್ಯ ಪುಷ್ಪ ಎಂದು ಗುರುತಿಸಿಕೊಂಡಿರುವ ಈ ಮರವನ್ನು ಸಂರಕ್ಷಿಸಲು ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.