ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

ಲಾಲೂ ಪ್ರಸಾದ್​ ಯಾದವ್​ (Lalu Prasad Yadav) ಕೊನೆಯ ಮಗ, ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ (Tejashwi Yadav)​ ಇಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ನವದೆಹಲಿಯಲ್ಲಿ ಖಾಸಗಿ ಆಗಿ ನಡೆದ ವಿವಾಹ ಸಂದರ್ಭದಲ್ಲಿ ರಾಚೆಲ್ ಗಾಡಿನ್ಹೋ ಅವರ ಕೈ ಹಿಡಿದಿದ್ದಾರೆ. ಈ ಸಮಾರಂಭದಲ್ಲಿ ತೇಜಸ್ವಿ ಯಾದವ್​ ಪೋಷಕರಾದ ಲಾಲ್​ ಪ್ರಸಾದ್ ಯಾದವ್​, ರಾಬ್ರಿ ದೇವಿ, ತೇಜಸ್ವಿಯಾದವ್​ ಸಹೋದರ- ಸಹೋದರಿಯರು ಮತ್ತು ಸಮಾಜವಾದಿ ಪಕ್ಷ ನಾಯಕ ಅಖೀಲೇಶ್​ ಯಾದವ್​ ಉಪಸ್ಥಿತರಿದ್ದರು

First published:

  • 16

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

    32 ವರ್ಷದ ತೇಜಸ್ವಿಯಾದವ್​ ಬಿಹಾರ ವಿಧಾನಸಭೆ ವಿಪಕ್ಷ ನಾಯಕರಾಗಿದ್ದಾರೆ. ಕಳೆದ ವರ್ಷದ ಬಿಹಾರ ಚುನಾವಣೆಯಲ್ಲಿ ಅವರು ತಮ್ಮ ಪಕ್ಷವನ್ನು ಪ್ರಬಲವಾಗಿ ಮುನ್ನಡೆಸಿದ ಅವರು ಆರ್​ಜೆಡಿಯ ಪ್ರಬಲ ನಾಯಕರಾಗಿದ್ದಾರೆ

    MORE
    GALLERIES

  • 26

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

    ಲಾಲ್​ ಪ್ರಸಾದ್​ ಯಾದವ್​ ಮತ್ತು ರಾಬ್ರಿ ದೇವಿಯ 9 ಜನ ಮಕ್ಕಳಲ್ಲಿ ತೇಜಸ್ವಿ ಯಾದವ್​ ಅತಿ ಕಿರಿಯರು. ಇವರಿಗೆ 7 ಜನ ಸಹೋದರಿಯರು ಮತ್ತು ತೇಜ ಪ್ರತಾಪ್​ ಅಣ್ಣ ಇದ್ದಾರೆ. ತೇಜ್​ ಪ್ರತಾಪ್​ ಯಾದವ್​ ಮದುವೆ ವಿಚಾರ ಕೂಡ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು

    MORE
    GALLERIES

  • 36

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

    ತೇಜಸ್ವಿ ಯಾದವ್​ ಮದುವೆಯಲ್ಲಿ ಕೇವಲ 50 ಮಂದಿ ಮಾತ್ರ ಭಾಗಿಯಾಗಿದ್ದಾರೆ. ಆಮಂತ್ರಿತರಿಗೆ ಮಾತ್ರ ಮದುವೆಗೆ ಅವಕಾಶ ನೀಡಲಾಗಿದೆ. ಮದುವೆ ಸಮಾರಂಭದ ಹಾಲ್​​ ಹೊರಗೆ ದೊಡ್ಡ ದೊಡ್ಡ ಬೌನ್ಸರ್​ಗಳನ್ನು ನೇಮಕ ಮಾಡಲಾಗಿತ್ತು

    MORE
    GALLERIES

  • 46

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

    ಅವರ ಮದುವೆಗೆ ಶುಭ ಹಾರೈಸಿ ಆರ್​ಜೆಡಿ ಪಕ್ಷದ ಮುಖ್ಯ ವಕ್ತಾರ, ಶಾಸಕ ಬಾಯ್​ ವಿರೇಂದ್ರ ಕೂಡ ಟ್ವೀಟ್​ ಮಾಡಿದ್ದಾರೆ.

    MORE
    GALLERIES

  • 56

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

    ದೇಶದೆಲ್ಲೆಡೆ ಕೋವಿಡ್​ ಸೋಂಕು ಹೆಚ್ಚಿರುವ ಹಿನ್ನಲೆ ಮದುವೆಯನ್ನು ಬಹಳ ಕಡಿಮೆ ಜನರ ಸಮ್ಮುಖದಲ್ಲಿ ಮಾಡಿಕೊಳ್ಳುವ ಉದ್ದೇಶ ತೇಜಸ್ವಿ ಯಾದವ್​ ಹೊಂದಿದ್ದರು. ಆದ್ದರಿಂದ ಮದುವೆಯಲ್ಲಿ ಕೇವಲ ಬೆರಳೆಣಿಕೆಯ ಮಂದಿ ಭಾಗಿಯಾಗಿದ್ದಾರೆ

    MORE
    GALLERIES

  • 66

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಾಲೂ ಕಿರಿಯ ಮಗ; ತೇಜಸ್ವಿ ಯಾದವ್​ ಮದುವೆ ಸಂಭ್ರಮದ ಚಿತ್ರಗಳು

    ತೇಜಸ್ವಿ ಯಾದವ್​ ಮದುವೆಯ ಸಂಭ್ರಮದ ಫೋಟೋಗಳನ್ನು ಅವರ ಸಹೋದರಿಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದಾರೆ

    MORE
    GALLERIES