ಅದೇ ಸಂದರ್ಶನದಲ್ಲಿ ರಿಷಿ ಹಾಗೂ ಅಕ್ಷತಾ ಮೂರ್ತಿಯವರು ಕ್ಯಾಲಿಫೋರ್ನಿಯಾದ ಪಂಚತಾರಾ ರಿಟ್ಜ್ ಕಾರ್ಲ್ಟನ್ ಹೋಟೆಲ್‌ನಲ್ಲಿ ತಂಗಿದರು ಈ ಮೂಲಕ ನಾನು ಅಕ್ಷತಾರಿಗೆ ಪ್ರಪೋಸ್ ಮಾಡಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಹೋಟೆಲ್‌ಗೆ ಹೋಗುವ ಮುನ್ನ ರಿಷಿ ಸುನಕ್ ಹಾಗೂ ಅಕ್ಷತಾ ಸುತ್ತಲಿನ ಪ್ರದೇಶದಲ್ಲಿ ವಾಕ್ ಮಾಡಿದರು ನಂತರ ರಿಷಿ ಅಕ್ಷತಾರಿಗೆ ಪ್ರಪೋಸ್ ಮಾಡಿದರು ಎಂದು ತಿಳಿಸಿದ್ದಾರೆ.
ರಿಷಿಯವರ ಕಾಲೆಳೆಯುತ್ತಿರುವ ನೆಟ್ಟಿಗರು: ಐಷಾರಾಮಿ ಹೋಟೆಲ್‌ನಲ್ಲಿ ತಂಗಲಾಗಲಿಲ್ಲ ಎಂದು ರಿಷಿಯವರು ನೀಡಿದ್ದ ಸ್ಟೇಟ್‌ಮೆಂಟ್ ಇದೀಗ ವೈರಲ್ ಆಗಿದ್ದು ತಮ್ಮಲ್ಲಿ ಅಪಾರ ಶ್ರೀಮಂತಿಕೆ ಹಾಗೂ ವೈಭೋಗವಿದ್ದರೂ ರಿಷಿ ಬಡವರಂತೆ ತೋರಿಕೆಯ ಮುಖವಾಡ ಧರಿಸಿದ್ದಾರೆ ಹಾಗೂ ಹೋಟೆಲ್‌ನಲ್ಲಿ ನಿಲ್ಲುವಷ್ಟು ಸಿರಿ‘ವಂತಿಕೆ ಇರಲಿಲ್ಲವೇ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಟ್ವಿಟರ್‌ನಲ್ಲಿ ರಿಷಿಯವರ ಈ ಹೇಳಿಕೆ ವೈರಲ್ ಆಗಿದ್ದು, ರಿಷಿ ಹಾಗೂ ಅಕ್ಷತಾ ಮೂರ್ತಿಯವರಿಗೆ ಅಷ್ಟೊಂದು ಬಡತನವಿತ್ತೇ ಎಂಬ ವ್ಯಂಗ್ಯದ ಕಾಮೆಂಟ್‌ಗಳು ಹರಿದಾಡುತ್ತಿವೆ. ಶ್ರೀಮಂತರ ಹವ್ಯಾಸವೇ ಬಡವರಂತೆ ವರ್ತಿಸುವುದು ಎಂಬಂತಹ ಮಾತಿನ ಬಾಣಗಳನ್ನು ಬಳಕೆದಾರರು ಹರಿಬಿಡುತ್ತಿದ್ದು, ಸಾಮಾನ್ಯ ಜನರಂತೆ ವರ್ತಿಸಲು ಇಷ್ಟಪಡುತ್ತಿದ್ದರೂ ಇಷ್ಟೊಂದು ಸುಳ್ಳು ಹೇಳುವುದು ಸರಿಯೇ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ರಿಷಿ ಹಾಗೂ ಅಕ್ಷತಾರ ಪರವಾಗಿ ಧನಾತ್ಮಕ ಕಾಮೆಂಟ್‌ಗಳು: ರಿಷಿ ಹಾಗೂ ಅಕ್ಷತಾರ ಪರವಾಗಿ ಕೆಲವೊಂದು ಧನಾತ್ಮಕ ಕಾಮೆಂಟ್‌ಗಳು ಬಂದಿದ್ದು ಇನ್ನಷ್ಟು ನೆಟ್ಟಿಗರು ಮಕ್ಕಳು ಒಮ್ಮೊಮ್ಮೆ ಪೋಷಕರ ಶ್ರೀಮಂತಿಕೆಯನ್ನು ಬಯಸುವುದಿಲ್ಲ. ತಂದೆ ತಾಯಿ ಎಷ್ಟೇ ಶ್ರೀಮಂತರಾಗಿದ್ದರೂ ಒಮ್ಮೊಮ್ಮೆ ಮಕ್ಕಳು ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಅಂತೆಯೇ ಪೋಷಕರು ಕೂಡ ತಮ್ಮ ಶ್ರೀಮಂತಿಕೆಯ ಸುಖ ಭೋಗಗಳು ಮಕ್ಕಳಿಗೆ ಸುಲಭವಾಗಿ ದೊರೆಯಬಾರದು ಹಾಗೂ ಅವರು ಕಷ್ಟವೇನು ಎಂಬುದನ್ನು ಅರಿತುಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಬಯಸುತ್ತಾರೆ ಎಂಬ ಕಾಮೆಂಟ್‌ಗಳನ್ನು ನೀಡಿದ್ದಾರೆ.