Veg Biriyani: ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ; ವೆಜ್ ಬಿರಿಯಾನಿಯಲ್ಲಿ ಚಿಕನ್ ಮೂಳೆ! ಠಾಣೆ ಮೆಟ್ಟಿಲೇರಿದ ಗ್ರಾಹಕ
ಆಕಾಶ್ ದುಬೆ ಅವರು ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಬಹಳ ಹಸಿವಿನಿಂದ ಕಾಯುತ್ತಿದ್ದ ಆಕಾಶ್ ಅವರಿಗೆ ತಮ್ಮ ವೆಜ್ ಬಿರಿಯಾನಿ ಪಾರ್ಸೆಲ್ ಸಿಕ್ಕಿತು. ನಂತರ ಸಂತಸದಿಂದ ವೆಜ್ ಬಿರಿಯಾನಿ ಪ್ಯಾಕೆಟ್ ಓಪನ್ ಮಾಡಿ ಇನ್ನೇನು ತಿನ್ನಬೇಕು ಅಷ್ಟರಲ್ಲಿಯೇ ಆಕಾಶ್ ಅವರಿಗೆ ವೆಜ್ ಬಿರಿಯಾನಿಯಲ್ಲಿ ಚಿಕನ್ ಮೂಳೆ ಪತ್ತೆಯಾಗಿದೆ.
ಎಷ್ಟೋ ಮಂದಿಗೆ ನಾನ್ ವೆಜ್ ಅಂದರೆ ಬಹಳ ಇಷ್ಟ ಆದರೆ ಅದೆಷ್ಟೋ ಮಂದಿಗೆ ಅದೇ ನಾನ್ವೆಜ್ ಅಂದ್ರೆ ಕಷ್ಟ. ಸಾಮಾನ್ಯವಾಗಿ ಸಸ್ಯಾಹಾರಿಗಳು ತರಕಾರಿ, ಸೊಪ್ಪು, ಹಣ್ಣು-ಹಂಪಲು ತಿಂದು ಬದುಕುತ್ತಾರೆ. ಆದರೆ ಇವರಿಗೆ ನಾನ್ವೆಜ್ ಅಂದರೆ ಒಂದು ರೀತಿ ಅಲರ್ಜಿ ಇದ್ದಂತೆ ಎಂದರೂ ತಪ್ಪಾಗಲಾರದು.
2/ 7
ಸಸ್ಯಾಹಾರಿಗಳು ನಾನ್ವೆಜ್ ವಾಸನೆ ಬಂದರೂ ಕೂಡ ಸಹಿಸುವುದಿಲ್ಲ. ಅಲ್ಲದೇ ಒಂದು ಪೀಸ್ ಕೇಕ್ನಲ್ಲಿ ಮೊಟ್ಟೆ ಬೆರೆಸಿದ್ದರೂ ಅದನ್ನು ಮುಟ್ಟುವುದಿಲ್ಲ. ಹೀಗಿರುವಾಗ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಹೋಟೆಲ್ನಲ್ಲಿ ಆರ್ಡರ್ ಮಾಡಿದ್ದ ವೆಜಿಟೆಬಲ್ ಬಿರಿಯಾನಿಯಲ್ಲಿ ಚಿಕನ್ ಮೂಳೆ ಪತ್ತೆಯಾಗಿದೆ.
3/ 7
ಇದರಿಂದ ಕೋಪಗೊಂಡ ಗ್ರಾಹಕ ಇದೀಗ ಹೋಟೆಲ್ ಮಾಲೀಕನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತೀಚೆಗಷ್ಟೇ ಇಂದೋರ್ನ ವಿಜಯ್ ನಗರದಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕ ಆಕಾಶ್ ದುಬೆ ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.
4/ 7
ವಿಜಯ್ನಗರದಲ್ಲಿರುವ ಹೋಟೆಲ್ನಲ್ಲಿ ಆಕಾಶ್ ದುಬೆ ಅವರು ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಬಹಳ ಹಸಿವಿನಿಂದ ಕಾಯುತ್ತಿದ್ದ ಆಕಾಶ್ ಅವರಿಗೆ ತಮ್ಮ ವೆಜ್ ಬಿರಿಯಾನಿ ಪಾರ್ಸೆಲ್ ಸಿಕ್ಕಿತು.
5/ 7
ನಂತರ ಸಂತಸದಿಂದ ವೆಜ್ ಬಿರಿಯಾನಿ ಪ್ಯಾಕೆಟ್ ಓಪನ್ ಮಾಡಿ ಇನ್ನೇನು ತಿನ್ನಬೇಕು ಅಷ್ಟರಲ್ಲಿಯೇ ಆಕಾಶ್ ಅವರಿಗೆ ವೆಜ್ ಬಿರಿಯಾನಿಯಲ್ಲಿ ಚಿಕನ್ ಮೂಳೆ ಪತ್ತೆಯಾಗಿದೆ. ಇದರಿಂದ ತೀವ್ರ ಕೋಪಗೊಂಡ ಗ್ರಾಹಕ ಆಕಾಶ್ ಹೋಟೆಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
6/ 7
ಬಳಿಕ ಈ ಬಗ್ಗೆ ಹೋಟೆಲ್ ಮಾಲೀಕ ಹಾಗೂ ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ. ಆದರೆ ಇದಕ್ಕೆ ಜಗ್ಗದ ಆಕಾಶ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ವಿಜಯ್ ನಗರ್ ಪೊಲೀಸ್ ಠಾಣೆಯಲ್ಲಿ ಹೊಟೇಲ್ ಮಾಲೀಕ ಸ್ವಪ್ನಿಲ್ ಗುಜರಾತಿ ಅವರ ವಿರುದ್ಧ ದೂರು ನೀಡಿದ್ದಾರೆ.
7/ 7
ಇದೀಗ ಈ ಘಟನೆ ಸಂಬಂಧ ಪೊಲೀಸರು ಮ್ಯಾನೇಜರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ, ಆಸೆಯಿಂದ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ ತಮ್ಮ ಮುಂದೆ ಊಟವಿದ್ದರೂ ತಿನ್ನಲಾಗಲಿಲ್ಲ.