Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

ಬಾಲ್ಯದಿಂದಲೂ ಪೋಲೀಸ್ ಆಗುವ ಗುರಿ ಹೊಂದಿದ್ದ ವ್ಯಕ್ತಿಯೊಬ್ಬರು ತಾವೂ ಅಂದುಕೊಂಡಂತೆ ಪೊಲೀಸ್​ ಕೆಲಸಕ್ಕೆ ಸೇರಿದರು. ಆದರೆ ಕೆಲವೇ ದಿನಗಳಲ್ಲಿ ಆ ಕೆಲಸವನ್ನು ಬಿಟ್ಟು ತಮ್ಮಿಷ್ಟದಂತೆ ಕೃಷಿಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಿ ತಿಂಗಳಿಗೆ 4 ಲಕ್ಷ ಸಂಪಾದಿಸುತ್ತಿದ್ದಾರೆ.

First published:

  • 110

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಬಾಲ್ಯದಿಂದಲೂ ಪೋಲೀಸ್ ಆಗುವ ಗುರಿ ಹೊಂದಿದ್ದ ವ್ಯಕ್ತಿಯೊಬ್ಬರು ತಾವೂ ಅಂದುಕೊಂಡಂತೆ ಪೊಲೀಸ್​ ಕೆಲಸಕ್ಕೆ ಸೇರಿದರು. ಆದರೆ ಕೆಲವೇ ದಿನಗಳಲ್ಲಿ ಆ ಕೆಲಸವನ್ನ ಬಿಟ್ಟು ತಮ್ಮಿಷ್ಟದ ಕೆಲಸ ಮಾಡಿ ತಿಂಗಳಿಗೆ 4 ಲಕ್ಷ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 210

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಸರ್ಕಾರಿ ಕೆಲಸ,  ಜೊತೆಗೆ ತಾವಿಷ್ಟ ಪಟ್ಟ ಪೊಲೀಸ್​ ಕೆಲಸವನ್ನು ಬಿಡುವ ನಿರ್ಧಾರವನ್ನು ಹಲವಾರು ಮಂದಿ ಟೀಕಿಸಿದರು. ಆದರೆ ಕೆಲವು ಅಹಿತಕರ  ಘಟನೆಗಳು ಮತ್ತು ವೇತನ ಹೆಚ್ಚಳದ ಕೊರತೆಯಿಂದಾಗಿ ಅವರು ಕೆಲಸಕ್ಕೆ ರಾಜೀನಾಮೆ ನೀಡಿದರು.

    MORE
    GALLERIES

  • 310

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಇದೇ ಕೆಲಸದಲ್ಲಿ ಮುಂದುವರಿದರೆ ತಾವೂ ಜೀವನದಲ್ಲಿ ಸೆಟ್ಲ್​ ಆಗುವುದು ಅಸಾಧ್ಯ ಎಂಬುದನ್ನು ಅರಿತ ಅವರು ಪೊಲೀಸ್​ ಆಗಿರುವ ಪತ್ನಿಗೆ ತಾವೂ ಕುರಿ, ಮೇಕೆ ಸಾಕಾಣಿಕೆ ಜೊತೆಗೆ ಜಿಮ್ ಮಾಡಿ ಹಣ ಸಂಪಾದಿಸುವ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

    MORE
    GALLERIES

  • 410

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಗಂಡನ ನಿರ್ಧಾರಕ್ಕೆ ಪತ್ನಿ ಕೂಡ ಒಪ್ಪಿದ್ದಾರೆ. ನಂತರ ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟ ಸತೀಶ್​ ತಾವಂದೂಕೊಂಡ ಕೆಲಸಗಳನ್ನು ಶುರು ಮಾಡಿದರು. ಈ ನಿರ್ಧಾರರಿಂದ ಅವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳಾದವು. ಹಣಕಾಸಿನ ಸಮಸ್ಯೆಗಳು ಮೊದಲಿನಂತಿಲ್ಲ, ಸುಖಕರ ಜೀವನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 510

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    2009 ರಿಂದ ಸತೀಶ್ ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು ಅವರ ಪತ್ನಿ ಪ್ರಸ್ತುತ ತಂಜಾವೂರಿನಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಕೂಡ ಇದ್ದಾರೆ. ಸತೀಶ್ ಕೆಲಸ ಬಿಟ್ಟು ತಮ್ಮದೇ ಹಳ್ಳಿಯಲ್ಲಿ ಮೇಕೆ, ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.

    MORE
    GALLERIES

  • 610

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಇದು ಒಳ್ಳೆಯ ನಿರ್ಧಾರ ಅಲ್ಲ ಎಂದು ಸತೀಶ್​ ಜೊತೆಗೆ ಕೆಲಸ ಮಾಡುವ ಇತರೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ ಯಾರ ಸಲಹೆಯನ್ನೂ ಪಡೆಯದೇ ತಮ್ಮದೇ ಆದ ದಾರಿಯಲ್ಲಿ ನಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ ಎಂದು ಸತೀಶ್ ಹೇಳಿದ್ದಾರೆ.

    MORE
    GALLERIES

  • 710

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಸತೀಶ್​ ಆರಂಭದಲ್ಲಿ ಮೇಕೆ ಸಾಕಾಣಿಕೆ ಆರಂಭಿಸಿದರು. ತಮ್ಮ ಮೂರು ಎಕರೆ ಸ್ವಂತ ಜಮೀನಿನಲ್ಲಿ ಎರಡು ಎಕರೆಯಲ್ಲಿ ಮೇಕೆ, ಕುರಿಗಳಿಗೆ ಮೇವು ಅಭಿವೃದ್ಧಿಪಡಿಸಿದ್ದಾರೆ. ತನ್ನ ಸ್ವಂತ ಕುಗ್ರಾಮದಲ್ಲಿ ತನ್ನ ತಂದೆ ಮಾಡುತ್ತಿದ್ದ ಕೃಷಿ ಕೆಲಸವನ್ನು ಈಗಿನ ವಾತಾವರಣಕ್ಕೆ ಹೊಂದುವ ಹಾಗೆ ಪರಿವರ್ತಿಸಿ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

    MORE
    GALLERIES

  • 810

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಮೊದಲು, ನನ್ನ ಕೆಲಸ ಬಿಡುವ ನಿರ್ಧಾರವನ್ನು ನನ್ನ ಹೆತ್ತವರು ಕೂಡ ಪ್ರಶ್ನಿಸಿದರು. ನಾನು ಅವರನ್ನು ಸಮಾಧಾನಪಡಿಸಿದೆ. ನಂತರ ನನ್ನ ನಿರ್ಧಾರದ ಬುದ್ಧಿವಂತಿಕೆಯನ್ನು  ಪೋಷಕರು ಅರಿತುಕೊಂಡರು. ಆರು ತಿಂಗಳೊಳಗೆ ನಾನು ಪೊಲೀಸ್​ ಕೆಲಸಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಗಳಿಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 910

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    ಸತೀಶ್ ಪ್ರಸ್ತುತ ತಂಜಾವೂರಿನಲ್ಲಿ ಪವರ್ ಸ್ಮ್ಯಾಕ್ ಎಂಬ ಅತಿದೊಡ್ಡ ಫಿಟ್‌ನೆಸ್ ಸೆಂಟರ್​ ಹೊಂದಿದ್ದಾರೆ. ಸತೀಶ್ ಸದಾ ಜಿಮ್ ನಡೆಸುವುದರಲ್ಲಿ ಹಾಗೂ ಆಡು ಸಾಕುವುದರಲ್ಲಿ ನಿರತರಾಗಿದ್ದಾರೆ. ಮೇಕೆ ಸಾಕಾಣಿಕೆ, ಹುಲ್ಲಿನ ಮಾರಾಟ, ಫಿಟ್ ನೆಸ್ ಸೆಂಟರ್ ನಡೆಸುವುದರಿಂದ ಸತೀಶ್ ತಿಂಗಳಿಗೆ ನಾಲ್ಕು ಲಕ್ಷ ಸಂಪಾದಿಸುತ್ತಾರೆ.

    MORE
    GALLERIES

  • 1010

    Success Story: ಪೊಲೀಸ್ ಕೆಲ್ಸಕ್ಕೆ ಗುಡ್‌ ಬೈ ಹೇಳಿದ ಇವ್ರಿಗೆ ಧೋನಿಯೇ ಸ್ಫೂರ್ತಿ! ಮೇಕೆ ಸಾಕಾಣಿಕೆ ಮಾಡಿ 4 ಲಕ್ಷ ಸಂಪಾದಿಸ್ತಿದ್ದಾರೆ ಈ ಸಾಧಕ!

    2027ರ ವೇಳೆಗೆ ನನ್ನ ಜೀವನದ ಗುರಿ ಮುಟ್ಟುತ್ತೇನೆ ಎಂದ ಸತೀಶ್, ಅಲ್ಲಿಯವರೆಗೆ ಒಂದು ಕ್ಷಣವನ್ನೂ ವ್ಯರ್ಥ ಮಾಡುವುದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ, ಸತೀಶ್ ಅವರು ತಮ್ಮ ಈ ನಿರ್ಧಾರಕ್ಕೆ ದೊಡ್ಡ ಸ್ಫೂರ್ತಿ ಬೇರೆ ಯಾರೂ ಅಲ್ಲ,ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಎಂದಿದ್ದಾರೆ. ಧೋನಿ ಅವರ 'ಫಲಿತಾಂಶಕ್ಕಿಂತ ಪ್ರಕ್ರಿಯೆ'ಯೇ ಮುಖ್ಯ ಎಂಬ ತತ್ವಕ್ಕೆ ಬದ್ಧರಾಗಿ ನಾನು ಗುರಿಯತ್ತ ಸಾಗುತ್ತಿದ್ದೇನೆ ಎನ್ನುತ್ತಾರೆ ಸತೀಶ್. ಧೋನಿ ಕೂಡ ರೈಲ್ವೆಯಲ್ಲಿ ಕೆಲಸ ಬಿಟ್ಟು ಕ್ರಿಕೆಟಿಗನಾಗಿ ಮುಂದುವರಿದು ಇಂದು ವಿಶ್ವದ ಗ್ರೇಟೆಸ್ಟ್ ಕ್ರಿಕೆಟರ್ ಆಗಿದ್ದಾರೆ.

    MORE
    GALLERIES