Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

ಭಾರತದಲ್ಲಿ ಇತ್ತೀಚಿಗಿನ ಒಂದೆರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಾ ಇದೆ. ಕಾರಣ ಏನು? ಇಲ್ಲಿದೆ ಫುಲ್​ ಡೀಟೇಲ್ಸ್​.

First published:

  • 111

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಸಾಮಾನ್ಯವಾಗಿ ಏಪ್ರಿಲ್ ಮೇ ಮಾಸ ಎಂದರೆ ಸೂರ್ಯ ನೆತ್ತಿಯ ಮೇಲೆ ಉರಿಯುವಷ್ಟು ಪ್ರಖರವಾದ ಬಿಸಿಲಿನ ಕಾಲ ಎಂಬುದು ಗೊತ್ತೇ ಇರುವ ವಿಚಾರ. ಆದರೆ ಈ ತಿಂಗಳುಗಳಲ್ಲಿ ಅದರಲ್ಲೂ ಮೇ ತಿಂಗಳಲ್ಲಿ ಭಾರತದ ಹಲವು ಭಾಗಗಳಲ್ಲಿ ವರುಣ ಅಬ್ಬರಿಸಿದ್ದಾನೆ ಹಾಗೂ ನಿರಂತರ ಮಳೆ ಸುರಿಸಿದ್ದಾನೆ. ಇನ್ನು ಕೆಲವು ಭಾಗಗಳಲ್ಲಿ ಮಳೆ ಬರುತ್ತಿದೆ.

    MORE
    GALLERIES

  • 211

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಪ್ರಖರ ಬೇಸಿಗೆಯ ಸಮಯದಲ್ಲಿ ಮಳೆ ಹೇಗೆ ಬರಲು ಸಾಧ್ಯ ಎಂಬುದು ನಿಮ್ಮ ಸಂದೇಹವಾಗಿದ್ದರೆ ಇದಕ್ಕೆ ಹವಾಮಾನ ವೈಪರೀತ್ಯಗಳು ಕಾರಣವಾಗಿರುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

    MORE
    GALLERIES

  • 311

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಇದೊಂದು ರೀತಿಯಲ್ಲಿ ಹಠಾತ್ ಹವಾಮಾನ ವೈಪರೀತ್ಯವಾಗಿದ್ದು, ಈ ರೀತಿಯ ಬದಲಾವಣೆ ಉಂಟಾಗಲೂ ಕಾರಣ ಇದ್ದೇ ಇರುತ್ತದೆ. ಪ್ರಕೃತಿಯ ಕೆಲವೊಂದು ಲೆಕ್ಕಾಚಾರಗಳು ಅದು ಸಂಭವಿಸಿದಾಗಲೇ ಅರಿವಿಗೆ ಬರುವುದು ಎಂಬುದಕ್ಕೆ ಹವಾಮಾನ ವೈಪರೀತ್ಯ ಉತ್ತಮ ಉದಾಹರಣೆಯಾಗಿದೆ. ಈ ರೀತಿ ಹವಾಮಾನದಲ್ಲಿ ಬದಲಾವಣೆಯಾಗಲು ಏನು ಕಾರಣ ಎಂಬುದಕ್ಕೆ ಇಲ್ಲಿದೆ ಉತ್ತರ.

    MORE
    GALLERIES

  • 411

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ವೆಸ್ಟರ್ನ್ ಡಿಸ್ಟರ್ಬನ್ಸ್ ಕಾರಣ ಎಂದ ತಜ್ಞರು: ಹವಾಮಾನ ತಜ್ಞರು ಈ ಹಠಾತ್ ಹವಾಮಾನ ಬದಲಾವಣೆಯ ವಿದ್ಯಮಾನವನ್ನು ವೆಸ್ಟರ್ನ್ ಡಿಸ್ಟರ್ಬನ್ಸ್ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ 6-6 ವೆಸ್ಟರ್ನ್ ಡಿಸ್ಟರ್ಬನ್ಸ್‌ಗೆ ಸಾಕ್ಷಿಯಾಗಿದೆ ಎಂದು ತಜ್ಞರು ತಿಳಿಸಿದ್ದು ಇದು ಏನು, ಏಕೆ ಸಂಭವಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

    MORE
    GALLERIES

  • 511

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಪ್ರತೀ ವರ್ಷ ಸಂಭವಿಸುವ ವಿದ್ಯಮಾನ ಇದಾಗಿದ್ದು ಈ ವರ್ಷ ಮಾತ್ರ ತುಸು ವಿಶೇಷವಾಗಿಯೇ ವಿದ್ಯಮಾನಗಳು ಜರುಗಿವೆ ಎಂದು ತಜ್ಞರು ತಿಳಿಸಿದ್ದಾರೆ.

    MORE
    GALLERIES

  • 611

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ವೆಸ್ಟರ್ನ್ ಡಿಸ್ಟರ್ಬನ್ಸ್ ಎಂದರೇನು? ವೆಸ್ಟರ್ನ್ ಡಿಸ್ಟರ್ಬನ್ಸ್ ಎಂಬುದು ಮೆಡಿಟರೇನಿಯನ್ ಪ್ರದೇಶದಲ್ಲಿ ರಚನೆಯಾಗುವ ಉಷ್ಣವಲಯದ ಚಂಡಮಾರುತವಾಗಿದ್ದು ಭಾರತೀಯ ಉಪಖಂಡದ ಉತ್ತರ ಭಾಗಗಳಿಗೆ ಹಠಾತ್ ಚಳಿಗಾಲದ ಮಳೆಯನ್ನು ತರುತ್ತದೆ ಅಂತೆಯೇ ಇದು ಬಾಂಗ್ಲಾದೇಶದ ಉತ್ತರ ಭಾಗಗಳು ಮತ್ತು ಆಗ್ನೇಯ ನೇಪಾಳದವರೆಗೆ ಪೂರ್ವದವರೆಗೆ ವಿಸ್ತರಿಸುತ್ತದೆ.

    MORE
    GALLERIES

  • 711

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಈ ಬಾರಿಯ ವೆಸ್ಟರ್ನ್ ಡಿಸ್ಟರ್ಬನ್ಸ್ ಪರಿಣಾಮಗಳೇನು? ಈ ಬಾರಿ ವೆಸ್ಟರ್ನ್ ಡಿಸ್ಟರ್ಬನ್ಸ್‌ನಿಂದಾಗಿ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಸೈಕ್ಲೋನಿಕ್ ಪರಿಚಲನೆ ಅಂದರೆ ಸೈಕ್ಲೋನಿಕ್ ಮಾರುತಗಳು ರೂಪುಗೊಂಡಿವೆ. ಈ ಚಂಡಮಾರುತದ ಗಾಳಿಯಿಂದಾಗಿ, ಉತ್ತರದಿಂದ ಪಶ್ಚಿಮ ಭಾರತದವರೆಗೆ ಮಳೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ಸೈಕ್ಲೋನಿಕ್ ವಿರೋಧಿ ಚಟುವಟಿಕೆಯಿಂದಾಗಿ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದೆ.

    MORE
    GALLERIES

  • 811

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಪ್ರಖರ ಬೇಸಿಗೆಗೆ ಎಲ್ ನಿನೋ ಕಾರಣ: ಹವಾಮಾನದಲ್ಲಿ ಕಂಡುಬಂದಿರುವ ಈ ಬದಲಾವಣೆಯಿಂದಾಗಿ ಈ ಬಾರಿ ಬೇಸಿಗೆ ಕೂಡ ಕಳೆದ ವರ್ಷಕ್ಕಿಂತ ತೀವ್ರವಾಗಿರುತ್ತದೆ ಹಾಗೂ ಇದಕ್ಕೆ ಎಲ್ ನಿನೋ ಕಾರಣವೂ ಒಂದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಎಲ್ ನಿನೋ ಎಂಬುದು ವಾಯುಗುಣ ಚಕ್ರವಾಗಿದ್ದು ಹವಾಮಾನ ಮಾದರಿಗಳ ಮೇಲೆ ಜಾಗತಿಕ ನೆಲೆಯಲ್ಲಿ ಪರಿಣಾಮ ಬೀರುತ್ತದೆ.

    MORE
    GALLERIES

  • 911

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಎಲ್ ನಿನೊದಿಂದಾಗಿ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಮಳೆಯ ಕ್ರಮವು ಹದಗೆಡಬಹುದು. ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ತಾಪಮಾನ ಏರಿಕೆಯ ಪರಿಣಾಮವು ಪ್ರಪಂಚದ ಅನೇಕ ದೇಶಗಳಲ್ಲಿ ಈಗ ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

    MORE
    GALLERIES

  • 1011

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಅಕಾಲಿಕ ಮಳೆಯು ಮಾನ್ಸೂನ್ ಮೇಲೆ ಪರಿಣಾಮ ಬೀರುತ್ತದೆಯೇ? ಸಾಮಾನ್ಯ ಮಾನ್ಸೂನ್‌ಗೆ ಉಷ್ಣತೆ ಅಗತ್ಯವಾಗಿದ್ದು ಈ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಿನ ಬಿಸಿಲು ಆರಂಭದಲ್ಲಿಯೇ ಅಷ್ಟೊಂದು ಪ್ರಖರವಾಗಿಲ್ಲ. ಈ ಹವಾಮಾನ ಬದಲಾವಣೆಯು ಮುಂಗಾರು ಮೇಲೆ ನೇರ ಪರಿಣಾಮ ಬೀರಲಿದೆ ಎಂದೂ ಹೇಳಲಾಗುತ್ತಿದೆ.

    MORE
    GALLERIES

  • 1111

    Weather Report: ಭಾರತದಲ್ಲಿ ಅಕಾಲಿಕ ಮಳೆ ಸುರಿಯುತ್ತಿರೋದೇಕೆ? ಇದು ಮಾನ್ಸೂನ್‌ ಮೇಲೆ ಪರಿಣಾಮ ಬೀರಲಿದೆಯಾ?

    ಈ ಅಕಾಲಿಕ ಮಳೆಯಿಂದ ಮಾನ್ಸೂನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆದರೆ ಹವಾಮಾನಶಾಸ್ತ್ರಜ್ಞರ ಭವಿಷ್ಯವೂ ವಿಫಲವಾದ ಎಷ್ಟೋ ಸನ್ನಿವೇಶಗಳು ಸಂಭವಿಸಿರುವುದರಿಂದ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    MORE
    GALLERIES