Ratan Tata: ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಅವರಿಗೆ ಒಲಿದು ಬಂದ ಆಸ್ಟ್ರೇಲಿಯಾದ ಅತ್ಯುನ್ನತ ಗೌರವ
ನವದೆಹಲಿ: ಉದ್ಯಮ ಕ್ಷೇತ್ರದ ದಿಗ್ಗಜ ರತನ್ ಟಾಟಾ ಅವರಿಗೆ ಆಸ್ಟ್ರೇಲಿಯಾ ಸರ್ಕಾರವು ಸಾಧಕರಿಗೆ ಕೊಡಮಾಡುವ ಅತ್ಯುನ್ನತ ನಾಗರಿಕ ಗೌರವ – ಆರ್ಡರ್ ಆಫ್ ಆಸ್ಟ್ರೇಲಿಯಾವನ್ನು ನೀಡಿ ಗೌರವಿಸಿದೆ.
ತಿಂಗಳ ಹಿಂದೆ ಆಸ್ಟ್ರೇಲಿಯಾ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ, ವಿಶೇಷವಾಗಿ ವ್ಯಾಪಾರ, ಹೂಡಿಕೆ ಮತ್ತು ಲೋಕೋಪಕಾರದ ವಿಶಿಷ್ಟ ಸೇವೆಗಾಗಿ ಆರ್ಡರ್ ಆಫ್ ಆಸ್ಟ್ರೇಲಿಯಾ ಜನರಲ್ ವಿಭಾಗದಲ್ಲಿ ಗೌರವ ಅಧಿಕಾರಿಯಾಗಿ ರತನ್ ಟಾಟಾ ನೇಮಕ ಮಾಡಲಾಗಿತ್ತು.
2/ 7
ಇದೀಗ ತಮ್ಮ ಅತ್ಯುನ್ನತ ನಾಗರಿಕ ಗೌರವವಾದ ‘ಆರ್ಡರ್ ಆಫ್ ಆಸ್ಟ್ರೇಲಿಯಾ’ ಪುರಸ್ಕಾರವನ್ನು ಹಿರಿಯ ಉದ್ಯಮಿ ರತನ್ ಟಾಟಾ ಅವರಿಗೆ ನೀಡಿ ಆಸ್ಟ್ರೇಲಿಯಾ ಸರ್ಕಾರ ಗೌರವಿಸಿದೆ.
3/ 7
ಈ ಸಮಾರಂಭದ ಚಿತ್ರಗಳನ್ನು ಭಾರತದಲ್ಲಿ ಇರುವ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ’ಫಾರೆಲ್ ಅವರು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
4/ 7
ತಮ್ಮ ಟ್ವೀಟ್‌ನಲ್ಲಿ ಫಾರೆಲ್ ಅವರು, ‘ರತನ್ ಟಾಟಾ ಉದ್ಯಮ, ಕ್ಯೆಗಾರಿಕೆ ಮತ್ತು ಲೋಕೋಪಕಾರದ ಟೈಟನ್ ಆಗಿದ್ದಾರೆ, ಆದರೆ ಅವರ ಕೊಡುಗೆಗಳು ಆಸ್ಟ್ರೇಲಿಯಾದಲ್ಲಿಯೂ ಗಮನಾರ್ಹ ಪ್ರಭಾವ ಬೀರಿವೆ’ ಎಂದು ಹೇಳಿದ್ದಾರೆ.
5/ 7
ಅಲ್ಲದೇ, ಆಸ್ಟ್ರೇಲಿಯ-ಭಾರತ ಸಂಬಂಧಕ್ಕೆ ರತನ್ ಟಾಟಾ ಅವರ ದೀರ್ಘಕಾಲದ ಬದ್ಧತೆಯನ್ನು ಗುರುತಿಸಿ ಆರ್ಡರ್ ಆಫ್ ಆಸ್ಟ್ರೇಲಿಯ (ಎಒ) ಗೌರವವನ್ನು ನೀಡಲು ಹರ್ಷ ಆಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
6/ 7
85 ವರ್ಷ ವಯಸ್ಸಿನ ಕೈಗಾರಿಕೋದ್ಯಮಿಯಾಗಿರುವ ರತನ್ ಟಾಟಾ ಅವರು, ಉದ್ಯಮ ಮಾತ್ರವಲ್ಲದೇ ಸಾಮಾಜಿಕ ಸೇವಾ ಕಾರ್ಯದಲ್ಲೂ ತಮ್ಮನ್ನು ತಾವು ಸಂಸ್ಥೆಯ ಮೂಲಕ ತೊಡಗಿಸಿಕೊಂಡಿದ್ದಾರೆ.
7/ 7
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕೈಗಾರಿಕೋದ್ಯಮಿಗೆ ಆರ್‌ಎಸ್‌ಎಸ್-ಸಂಯೋಜಿತ ಸೇವಾ ಭಾರತಿಯು ಲೋಕೋಪಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ‘ಸೇವಾ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
First published:
17