ಹಿಮಾಚಲ ಪ್ರದೇಶ ನಾವು ವಾಸಿಸುವ ಸ್ಥಳಗಳಿಗಿಂತ ಭಿನ್ನವಾಗಿರುತ್ತದೆ. ಅಲ್ಲಿ ಸದಾ ಹಿಮಾ ಬೀಳುತ್ತಿರುತ್ತದೆ. ಆದರೆ ನೋಡುವುದಕ್ಕೆ ಸುಂದರವಾಗಿ ಕಂಡರೂ ಎತ್ತ ನೋಡಿದರತ್ತಾ ಹಿಮರಾಶಿ ಕಾಣುವುದರಿಂದ ರಸ್ತೆಗಳೆಲ್ಲಾ ತುಂಬಾ ಗೊಂದಲವನ್ನು ಉಂಟು ಮಾಡುತ್ತವೆ. ಯಾವುದೂ ಊರು ದಾರಿ, ಕಾಡಿನ ದಾರಿ ಯಾವುದು ಎನ್ನುವ ಗೊಂದಲ ಉಂಟಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಹಿಮ ಚಿರತೆಗಳಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಸ್ಪಿತಿ ಕಣಿವೆಯಿಂದ ಹಿಮದ ರಾಶಿಯಲ್ಲಿ ನಡೆದುಕೊಂಡು ಬರುವ ಹಿಮ ಪ್ರಾಣಿಗಳು ದಾರಿ ತಪ್ಪಿ ಜನವಸತಿ ಪ್ರದೇಶಗಳಿಗೆ ಬರುವುದು ಹೆಚ್ಚಾಗುತ್ತಿದೆ.