Rafale Jet: ಭಾರತಕ್ಕೆ ಮೊದಲ ರಫೇಲ್ ಜೆಟ್ ಹಸ್ತಾಂತರಿಸಿದ ಫ್ರಾನ್ಸ್; ಇಲ್ಲಿದೆ ಫೋಟೋಗಳು
ಫ್ರಾನ್ಸ್ನ ಡಸ್ಸೋ ಏವಿಯೇಶನ್ ಸಂಸ್ಥೆಯಿಂದ 36 ರಫೇಲ್ ಜೆಟ್ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತಕ್ಕೆ ಇಂದು ಮೊದಲ ವಿಮಾನ ಅಧಿಕೃತವಾಗಿ ಹಸ್ತಾಂತರವಾಗಿದೆ. ಫ್ರಾನ್ಸ್ನ ಬಾರ್ಡೀಕ್ಸ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಡಸ್ಸೋ ಏವಿಯೇಶನ್ ಸಂಸ್ಥೆ ತನ್ನ ರಫೇಲ್ ಯುದ್ಧವಿಮಾನವನ್ನು ಹಸ್ತಾಂತರಿಸಿತು.